
ಕಲ್ಮಕಾರು ಗ್ರಾಮದ ಬಿಳಿಮಲೆ ಎಂಬಲ್ಲಿ ವೃತ್ತಾಕಾರದ ಗುಹೆಯೊಂದು ಪತ್ತೆಯಾಗಿದೆ. ಬಿಳಿಮಲೆ ಉಮೇಶ್ ಅವರ ಮನೆಯ ಪಕ್ಕದಲ್ಲಿ ಈ ಗುಹೆ ಪತ್ತೆಯಾಗಿದೆ. ಗುಹೆಯ ಮೇಲ್ಭಾಗಕ್ಕೆ ಮುಚ್ಚಳದಂತೆ ಕಲ್ಲೊಂದನ್ನು ಕೆತ್ತಿದಂತೆ ಕಾಣುತ್ತಿದೆ. ಬಿಳಿಮಲೆ ಉಮೇಶ್ ಅವರ ರಬ್ಬರ್ ತೋಟದಲ್ಲಿ ಜೆಸಿಬಿ ಮೂಲಕ ಅಗೆತ ನಡೆಸುವ ವೇಳೆ ಇದು ಪತ್ತೆಯಾಗಿದೆ. ಅಗೆತ ವೇಳೆ ಮುಚ್ಚಳದ ಮಾದರಿ ಪತ್ತೆಯಾಗಿದ್ದು, ಅದನ್ನು ತೆಗೆದಾಗ ಸುರಂಗ ಪತ್ತೆಯಾಗಿದ್ದು, ಒಳಭಾಗ ದೊಡ್ಡ ಗಾತ್ರದ ಸ್ನಾನದ ಹಂಡೆ ಮಾದರಿಯಲ್ಲಿದೆ, ಸುಮಾರು 6 ಅಡಿ ಆಳವಿದೆ. ಕೆತ್ತನೆ ಮೂಲಕ ನಿರ್ಮಿಸಿರುವುದು ಕಂಡುಬಂದಿದೆ. ಹಿಂದಿನ ಕಾಲದಲ್ಲಿ ಅಡಗು ತಾಣವಾಗಿ ಬಳಸಲು ಇದನ್ನು ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ.