
ಕರ್ನಾಟಕ ಸರಕಾರದ ಪಂಚ ಗ್ಯಾರಂಟಿಗಳ ಸಮಾವೇಶ ನಡೆಯುತ್ತಿದ್ದು, ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ವೇದಿಕೆಗೆ ಏರಿ ಬಂದ ಜಿ.ಕೃಷ್ಣಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಮತ್ತು ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿರವವರ ಬಳಿ ತೆರಳಿ ಏರು ಧ್ವನಿಯಲ್ಲಿ ತನ್ನನ್ನು ಆಹ್ವಾನಿಸದ ಕುರಿತು ಅಸಮಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು. ಬಳಿಕ ಕಾಂಗ್ರೆಸ್ ಮುಖಂಡರು ವೇದಿಕೆಗೆ ಆಗಮಿಸಿ ಅವರನ್ನು ಕರೆದೊಯ್ದ ಘಟನೆ ನಡೆಯಿತು.
