Ad Widget

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಬುಡ್ಲೆಗುತ್ತು ಹಾಗೂ ಬೊಳ್ಳೂರು ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಕಿರಣ್ ಬುಡ್ಲೆಗುತ್ತು ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ರಾಧಾಕೃಷ್ಣ ಬೊಳ್ಳೂರು ರವರು ಆಯ್ಕೆ ಗೊಂಡಿರುತ್ತಾರೆ.

ಅರಂತೋಡು: ಅಂಗಡಿಮಜಲು – ರೆಂಜಾಳ ಸಂಪರ್ಕ ರಸ್ತೆಯ ಅಭಿವೃದ್ಧಿಗೆ ಶಾಸಕರಿಂದ ಗುದ್ದಲಿಪೂಜೆ

ಅರಂತೋಡಿನಿಂದ ಅಂಗಡಿಮಜಲು ಬಾಜಿನಡ್ಕ ಮೂಲಕ ಮರ್ಕಂಜ ಗ್ರಾಮದ  ರೆಂಜಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಾ.8ರಂದು ಸಂಜೆ ಗುದ್ದಲಿಪೂಜೆ ನೆರವೇರಿಸಿದರು.ಅರಂತೋಡು ಗ್ರಾಮದ ಅಂಗಡಿಮಜಲು ಬಾಜಿನಡ್ಕ ಮೂಲಕ ಮರ್ಕಂಜ ಗ್ರಾಮದ ರೆಂಜಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟಿದ್ದು, ದ್ವಿಚಕ್ರ ಸೇರಿದಂತೆ ಇತರೆ ವಾಹನ ಸಂಚಾರಕ್ಕೆ  ತೊಂದರೆಯಾಗಿದ್ದು, ಈ ಭಾಗದ ನಾಗರಿಕರು ಸೇರಿ...
Ad Widget

ಪೆರುವಾಜೆ : ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಗೆ ಶಿಲಾನ್ಯಾಸ

ಬೆಳ್ಳಾರೆ : ದ.ಕ.ಸಂಸದ ಹಾಗೂ ಸುಳ್ಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 10 ಲಕ್ಷ ಅನುದಾನದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ರಸ್ತೆ ಅಗಲೀಕರಣ, ಇಂಟರ್‌ ಲಾಕ್ ಅಳವಡಿಕೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮವು ಮಾ.8 ರಂದು ನಡೆಯಿತು.ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಭಾಗೀರಥಿ ಮುರುಳ್ಯ ಅವರು ಶಿಲಾನ್ಯಾಸ ನೆರವೇರಿಸಿದರು. ಪ್ರಾರಂಭದಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ...

ಬೆಳ್ಳಾರೆ : ಅಟೋರಿಕ್ಷಾ ತಂಗುದಾಣ ಲೋಕಾರ್ಪಣೆ – ದ.ಕ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ :  ಸಂಸದ ನಳಿನ್ – ಸಚಿನ್ ರೈ ಪೂವಾಜೆ ಸಹಿತ ಹಲವರಿಗೆ ಗೌರರ್ವಾಪಣೆ

ಬೆಳ್ಳಾರೆ: ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಕಲ್ಪನೆಗೆ ಪೂರಕವಾಗಿ ದ.ಕ.ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಕಳೆದ ಹದಿನೈದು ವರ್ಷಗಳಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.5 ಲಕ್ಷ ವೆಚ್ಚದಲ್ಲಿ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ನಿರ್ಮಿಸಿದ ಅಟೋರಿಕ್ಷಾ ತಂಗುದಾಣವನ್ನು ಮಾ.8 ರಂದು...

ಸುಶೀಲೆ ಬೊಮ್ಮಾರು

ಮರ್ಕಂಜ ಗ್ರಾಮದ ಬೊಮ್ಮಾರು ಶಂಕರ ಗಿರಿ ಎಸ್.ನಾರಾಯಣ ಭಟ್ ರವರ ಪತ್ನಿ ಸುಶೀಲೆ (80) ಸ್ವಗೃಹದಲ್ಲಿ ಮಾ.06 ರಂದು ನಿಧನರಾದರು. ಮೃತರು ಪತಿ, ಪುತ್ರರಾದ ಉದಯಶಂಕರ, ಕೇಶವಪ್ರಕಾಶ್ , ಪುತ್ರಿಯರಾದ ಜಯಲಕ್ಷ್ಮಿ, ಸುಮನ, ಶೋಭ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಐವರ್ನಾಡು : ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 31 ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ  ಅರ್ಚಕ ಪದ್ಮನಾಭ ಭಟ್ ರವರಿಗೆ ಸಾರ್ವಜನಿಕ ಸನ್ಮಾನ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸುದೀರ್ಘ 31 ವರ್ಷಗಳ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಮಾ.12 ರಂದು ಸೇವಾ ನಿವೃತ್ತಿ ಹೊಂದಲಿರುವ ಪ್ರಧಾನ ಅರ್ಚಕಪದ್ಮನಾಭ ಭಟ್ ರವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವು ಮಾ.08 ರಂದು ದೇವಸ್ಥಾನದಲ್ಲಿ ನಡೆಯಿತು.ಪದ್ಮನಾಭ ಭಟ್ ಮತ್ತು ಶ್ರೀಮತಿ ಚಂದ್ರಾವತಿ ಪಿ. ದಂಪತಿಗಳನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.ಸನ್ಮಾನ...

ವಾಲ್ತಾಜೆ : ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಕರಂಗಲ್ಲು ರಸ್ತೆಯ ವಾಲ್ತಾಜೆಯ ಶಿರಾಡಿ ನದಿ ಬಳಿ ಹಾಗೂ ಬಲ್ಕಜೆ ಎಂಬಲ್ಲಿ ಲೋಕಸಭಾ ಸದಸ್ಯರಾದ ನಳಿನ್‌ ಕುಮಾರ್ ಕಟೀಲ್‌ರವರ ರೂ. 7.50 ಲಕ್ಷ ಅನುದಾನದಿಂದ ನಿರ್ಮಿಸುವ ಕಾಂಕ್ರೀಟ್ ರಸ್ತೆಯ ಗುದ್ದಲಿ ಪೂಜೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಗ್ರಾ.ಪಂ.ಸದಸ್ಯ ಭವಾನಿಶಂಕರ ಮುಂಡೋಡಿ,...

ಕಾಸರಗೋಡಿನಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದ ಪೈಂಬೆಚ್ಚಾಲ್ ಮೂಲದ ವೈದ್ಯ ಖಾಸಗಿ ಆಸ್ಪತ್ರೆಯಲ್ಲಿ ಮೃತ್ಯು.

ಕಾಸರಗೋಡಿನಲ್ಲಿ ಡೆಂಟಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೈಂಬೆಚ್ಚಾಲ್ ಮೂಲದ ಡಾ.ಮೊಹಮ್ಮದ್ ಡಿ ಎಂ ಎಂಬುವವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹದಗೆಟ್ಟ ಅರಂತೋಡು ರೆಂಜಾಳ ರಸ್ತೆ  ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಅರಂತೋಡು ಅಡ್ಕಬಳೆ ಬಾಜಿನಡ್ಕ ರೆಂಜಾಳ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ. ಇದರಿಂದ ಬೇಸತ್ತ ಈ ಭಾಗದ ಜನತೆ ಮತದಾನ ಬಹಿಷ್ಕಾರಕ್ಕೆ ತೀರ್ಮಾನಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.

ಉಬರಡ್ಕ ಕೆರೆಗೆ ಜಾರಿ ಬಿದ್ದು ಯುವಕ ಮೃತ್ಯು

ಉಬರಡ್ಕ ಗ್ರಾಮದ ಚೈಪೆ ಸುಂದರಿ ಎಂಬವರ ತೋಟಕ್ಕೆ ಜಯನಗರ ಯೋಗಿಶ ಎಂಬುವವರು ಕೆಲಸಕ್ಕೆ ಹೋಗಿದ್ದು ಅಲ್ಲಿ ಕಾಲು ಜಾರಿ ತೋಟದದಲ್ಲಿದ್ದ ಬಾವಿಗೆ ಬಿದ್ದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಅಲ್ಲದೆ ಯುವಕನ ಮನೆಯವರು ಸ್ಥಳಕ್ಕೆ ಬರುತ್ತಿರುವುದಾಗಿ ತಿಳಿದು ಬಂದಿದೆ.
Loading posts...

All posts loaded

No more posts

error: Content is protected !!