Ad Widget

ಎಣ್ಮೂರು ಪ್ರೌಢಶಾಲೆಯಲ್ಲಿ ಆಟಿ ಆಚರಣೆ ಮತ್ತು ಆಟಿ ತಿನಿಸುಗಳ ಸ್ಪರ್ಧೆ

ಸರಕಾರಿ ಪ್ರೌಢ ಶಾಲೆ ಎಣ್ಮೂರು ಇಲ್ಲಿ ಆಟಿ ತಿಂಗಳ ವಿಶಿಷ್ಟ ಖಾದ್ಯಗಳ ಪ್ರದರ್ಶನ ಮತ್ತು ಆಟಿ ಆಚರಣೆ ಜುಲೈ 22 ರಂದು ನಡೆಯಿತು. ತುಳುನಾಡು ಅನೇಕ ವಿಶಿಷ್ಟ ಹಬ್ಬಗಳ ತವರೂರು, ಇಲ್ಲಿನ ಭಾಷೆ ಸಂಸ್ಕೃತಿ ಆಚರಣೆ ಹಬ್ಬ ಹರಿದಿನ ಪ್ರತಿಯೊಂದರಲ್ಲೂ ತುಳುನಾಡಿನ ಮಣ್ಣಿನ ಸೊಗಡು ಘಮಘಮಿಸುತ್ತಿರುತ್ತದೆ. ಇದನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಸದುದ್ದೇಶದಿಂದ ಶಾಲೆಯಲ್ಲಿ ಹಲವಾರು...

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಆಟಿದ ಲೇಸು” ಕಾರ್ಯಕ್ರಮ

ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿದ ಲೇಸು ಕಾರ್ಯಕ್ರಮ ಜು.22ರಂದು ನಡೆಯಿತು. ಕಾರ್ಯಕ್ರಮ ಶಾಲಾ ಆಡಳಿತ ಮಂಡಳಿ ಸಹಕಾರದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ವಿದ್ಯಾಬೋಧಿನೀ ಎಜುಕೇಷನ್ ಸೊಸೈಟಿ ಬಾಳಿಲ ಇದರ ಕೋಶಾಧಿಕಾರಿಯಾದ ರಾಧಾಕೃಷ್ಣ ರಾವ್ ಉಡುವೆಕೋಡಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬಾಬು ಅಜಿಲ ಆಟಿ ತಿಂಗಳ ವೈಶಿಷ್ಟ್ಯತೆಯ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಶಾಲಾ...
Ad Widget

ವಿದ್ಯುತ್ ಲೈನ್ ದುರಸ್ತಿ ವೇಳೆ ಬಿದ್ದ ಕಂಬ, ಪವರ್ ಮ್ಯಾನ್ ಗೆ ಗಾಯ

ಸುಳ್ಯ ಸಂಪಾಜೆಯಲ್ಲಿ ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದು ಕಂಬದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪವರ್ ಮ್ಯಾನ್ ಗಾಯಗೊಂಡ ಘಟನೆ ಸಂಪಾಜೆಯ ಚಟ್ಟೆಕಲ್ಲಿನಲ್ಲಿ ಇಂದು ನಡೆದಿದೆ. ಇಂದು ವಿಪರೀತ ಗಾಳಿ ಮಳೆಗೆ ವಿದ್ಯುತ್ ಲೈನ್ ತುಂಡಾಗಿದ್ದು,ತಕ್ಷಣವೇ ದುರಸ್ತಿ ಮಾಡಲು ಕಂಬ ಹತ್ತಿದ ಪವರ್ ಮ್ಯಾನ್ ಸಂಗಮೇಶ ಎಂಬವರು ಕೆಲಸ...

ಕುಕ್ಕೆ ಸುಬ್ರಹ್ಮಣ್ಯ : ಕುಮಾರಧಾರ ಸ್ನಾನ ಘಟ್ಟ ಮುಳುಗಡೆ

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಇಂದು ಸಂಜೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.ಘಟ್ಟ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿದೆ. ಇತ್ತ ಸುಬ್ರಹ್ಮಣ್ಯದ ಪರಿಸರದಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು ಭಕ್ತಾಧಿಗಳಿಗೆ ನೀರಿಗಿಳಿಯದಂತೆ ಸೂಚನೆ ನೀಡಲಾಗಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಭಕ್ತರು ನೀರಿಗಿಳಿಯದಂತೆ ಕಾವಲು ಕಾಯುತ್ತಿದ್ದಾರೆ.

ಭಜರಂಗದಳ ಕಾರ್ಯಕರ್ತರ ಗಡಿಪಾರಿಗೆ ಚಿಂತನೆ – ಖಂಡನೆ ವ್ಯಕ್ತಪಡಿಸಿದ ವಿ.ಹೆಚ್.ಪಿ. ಸುಳ್ಯ ಪ್ರಖಂಡ

ಗಡಿಪಾರಿನ ಮೂಲಕ ಭಜರಂಗದಳವನ್ನು ಮಟ್ಟ ಹಾಕುತೇವೆ ಎಂದು ಹೊರಟಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ.ಭಜರಂಗದಳ ಕಾರ್ಯಕರ್ತರು ಧರ್ಮದ ರಕ್ಷಣೆಯ ಜತೆಗೆ ಸಮಾಜಮುಖಿ ಕೆಲಸ ಮಾಡುತ್ತಾ ನೆರೆ ಹಾಗೂ ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತ ಬಂದಿದ್ದಾರೆ. ಇಂತಹ ಕಾರ್ಯಕರ್ತರನ್ನು ಗಡಿ ಪಾರು ಮಾಡುವುದನ್ನು ವಿಶ್ವ ಹಿಂದೂ ಪರಿಷತ್, ಭಜರಂಗದಳ ಸುಳ್ಯ ಪ್ರಖಂಡ...

ಅಜ್ಜಾವರ ಗ್ರಾಮ ಪಂಚಾಯತ್ ಗೆ ತಾ.ಪಂ.ಮುಖ್ಯಕಾರ್ಯನಿರ್ವಾಹಣಾಧಿಕಾರಿ ಭೇಟಿ – ಡಿಜಿಟಲ್‌ ಲೈಬ್ರರಿ ಹಾಗೂ ಗೃಹಲಕ್ಷ್ಮಿ ನೋಂದಣಿ ಬಗ್ಗೆ ಮಾಹಿತಿ ಸಂಗ್ರಹ

ಸುಳ್ಯ ತಾಲೂಕಿನ ಬಹುತೇಕ ಪಂಚಾಯತ್ ಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಸರ್ವರ್ ಸಮಸ್ಯೆ, ತಾಂತ್ರಿಕ ಅಡಚಣೆ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ಅಜ್ಜಾವರ ಗ್ರಾಮ ಪಂಚಾಯತ್ ಗೆ ತಾಲೂಕು ಕಾರ್ಯನಿರ್ವಾಹನಾ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೃಹ ಲಕ್ಷ್ಮಿ ಯೋಜನೆಯು ಪಲಾನುಭವಿಗಳಿಗೆ ತಲುಪುವಂತೆ ಮಾಡಬೇಕು ಎಂದು ಪಂಚಾಯತ್ ಆಡಳಿತ ಸಿಬ್ಬಂದಿಗಳಿಗೆ ಸೂಚಿಸಿದರು....

ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರದಲ್ಲಿ ವಿಧ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರದಲ್ಲಿ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಇಂದು ನಡೆಯಿತು. ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಅವರು ಉದ್ಘಾಟಿಸಿ ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲೆಯು 4 ವರ್ಷಗಳ ಹಿಂದೆ ಮೇಲ್ದರ್ಜೆಗೇರಿದ್ದು, ಸರಕಾರದಿಂದ ಸುಮಾರು 19 ಕೋಟಿ ಅನುದಾನವಿದ್ದು, ಸರಕಾರದೊಂದಿಗೆ,ನಿರಂತರ ಸಂಪರ್ಕ ಸಾದಿಸಿ ಅತೀ ಶೀಘ್ರದಲ್ಲಿ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ...

ಮಂಡೆಕೋಲು : ಶಾಸಕಿ ಭಾಗೀರಥಿ ಮುರುಳ್ಯರಿಂದ ವಿವಿಧ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ

ಒಂದು ಕಾಲದಲ್ಲಿ ಕುಗ್ರಾಮವೆಂದು ಗುರುತಿಸಿಕೊಂಡ ಮಂಡೆಕೋಲು ಇಂದು ಅಭಿವೃದ್ಧಿಗೊಂಡು ಸುಗ್ರಾಮವಾಗಿ ರೂಪುಗೊಂಡಿದೆ ಎಂದು ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ದ.ಕ.ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್, ಮಂಡೆಕೋಲು ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆ, ಅಮೃತ ಗ್ರಾಮ ಯೋಜನೆ ಮತ್ತು ಸರಕಾರದ ವಿಶೇಷ ಅನುದಾನದಿಂದ ಕೈಗೊಂಡ ಕಾಮಗಾರಿಗಳನ್ನು...

ಹರಿಹರ ಪಲ್ಲತ್ತಡ್ಕ : ಜು.22 ರಂದು ಲಯನ್ಸ್ ಕ್ಲಬ್ ವತಿಯಿಂದ ಹಿರಿಯ ನಾಗರಿಕರ ಸಮ್ಮಿಲನ ಹಾಗೂ ಸನ್ಮಾನ ಕಾರ್ಯಕ್ರಮ

ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ವತಿಯಿಂದ ಸಂದ್ಯಾರಶ್ಮಿ ಮತ್ತು ಸಂದ್ಯಾಚೇತನ ಸುಳ್ಯ ತಾಲೂಕು ಇದರ ಸಹಯೋಗದೊಂದಿಗೆ ಜು.22 ರಂದು ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ಹಿರಿಯ ನಾಗರಿಕರ ಸಮ್ಮಿಲನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ವೈದ್ಯರಾದ ಡಾ| ಚಂದ್ರಶೇಖರ ಕಿರಿಭಾಗ, ಭಾರತೀಯ ನೌಕಾಪಡೆಯ ದೀಕ್ಷಿತ್.ಕೆ.ಜೆ ಹಾಗೂ ಚಾರ್ಟೆಡ್ ಅಕೌಂಟೆಂಟ್ ಆಶ್ರಿತಾ ಪೊಯ್ಯೆಮಜಲು ಇವರಿಗೆ...

ಸುಬ್ರಹ್ಮಣ್ಯ : ಗದ್ದೆಯಲ್ಲಿ ನೇಜಿ ನಾಟಿ ಮಾಡಿ ಸಂಭ್ರಮಿಸಿದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ಭತ್ತದ ಗಿಡ ನಾಟಿ ಮಾಡುವ ಗದ್ದೆಯಲ್ಲಿ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿದರು. ಸುಬ್ರಹ್ಮಣ್ಯ ಸಮೀಪದ ಪರ್ವತಮುಖಿಯ ರಾಮಣ್ಣ ಅವರ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯ ನಡೆಯಿತು. ಗದ್ದೆಗಳಲ್ಲಿ ಸಸಿ ನೆಟ್ಟು, ಕೆಸರಲ್ಲಿ ಮಿಂದೆದ್ದು ವಿದ್ಯಾರ್ಥಿಗಳು ನೇಗಿಲ ಯೋಗಿಗಳಾದರು.  ಹಿರಿಯರು...
Loading posts...

All posts loaded

No more posts

error: Content is protected !!