- Saturday
- November 23rd, 2024
ಅಜ್ಜಾವರ ಗ್ರಾಮದ ಕರಿಯಮೂಲೆ ಎಂಬಲ್ಲಿ ಬರೆ ಕುಸಿತದ ಪರಿಣಾಮ ಮಣ್ಣು ಚರಂಡಿಗೆ ಬಿದ್ದಿದ್ದು ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿ ಹರಿದು ಸಮೀಪದ ಸವಿತಾ ಎಂಬುವವರ ಮನೆಗೆ ಅಪಾಯ ಎದುರಾಗಿದೆ. ಮನೆಯ ಕೆಳ ಭಾಗದಲ್ಲಿ ಪಯಸ್ವಿನಿ ನದಿಯ ನೀರಿನ ಪ್ರವಾಹ ಬಂದಿದ್ದು, ಇತ್ತ ಇನ್ನೊಂದು ಮೇಲೆ ಬದಿಯಲ್ಲಿ ಬರೆ ಕುಸಿತವಾಗಿ ನೀರು ಮನೆ ಕಡೆಗೆ ಹರಿದು ಬರುತ್ತಿದ್ದು...
ಭಾರಿ ಮಳೆಗೆ ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಸಂಪರ್ಕಿಸುವ ಸೇತುವೆಯ ಒಂದು ಭಾಗ ಕೊಚ್ಚಿ ಹೋದ ಸ್ಥಳಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಸ್ಥಳೀಯರೊಂದಿಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಮಾಧವ ಚಂತಾಳ, ಜಯಶ್ರೀ ಚಾಂತಾಳ, ರವಿಚಂದ್ರ, ಮಧು, ಶಿವಕುಮಾರ ಚಂತಾಳ, ಜಯಂತ...
ಮದೆನಾಡು ಸಮೀಪದ ಕರ್ತೋಜೆಯಲ್ಲಿ ಮರ ಸಹಿತ ಭೂ ಕುಸಿತವಾಗಿದ್ದು ಸಂಚಾರ ಸ್ಥಗಿತಗೊಂಡಿದೆ. ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದೆ. ರಸ್ತೆಗೆ ಕುಸಿದಿರುವ ಮಣ್ಣು ಹಾಗೂ ಮರ ತೆರವಿಗೆ ಜೆಸಿಬಿ-ಹಿಟಾಚಿ ಯಂತ್ರ ಬಳಿಸಿ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಭಾರೀ ಮಳೆಯ ನಡುವೆಯು ಮಡಿಕೇರಿ ಹಾಗೂ ಕೊಯನಾಡು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಹರಿಹರ ಪಲ್ಲತ್ತಡ್ಕ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯಲ್ಲಿ ಐನೆಕಿದು ಬಳಿ ಇಂದು ಸಂಜೆ ಬರೆ ಕುಸಿದು ಬಿದ್ದಿದೆ. ಬರೆಯಲ್ಲಿದ್ದ ಮರಗಳು ಕೂಡ ರಸ್ತೆಗೆ ಬಿದ್ದು ಸಂಚಾರ ಸ್ಥಗಿತಗೊಂಡಿದೆ.
ಸುಳ್ಯ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ 21 ತಾಸುಗಳಲ್ಲಿ ಅತೀ ಹೆಚ್ಚಿನ ಮಳೆ ದಾಖಲಾಗಿರುತ್ತದೆ. ಇದೇ ಹವಾಮಾನ ಪರಿಸ್ಥಿತಿಯೂ ಮುಂದುವರಿಯುವ ಸೂಚನೆಯಿದ್ದು, ಅರೆಂಚ್ ಅಲರ್ಟ್ ಘೋಷಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸುಳ್ಯ ತಾಲೂಕು ವಿಪತ್ತು ನಿರ್ವಹಣಾ ಪ್ರಾಧಿಕಾರವು ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ, ಸರ್ಕಾರಿ ಅನುದಾನಿತ...
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜು.24 ರಂದು ಹರಿಹರ ಪಲ್ಲತ್ತಡ್ಕದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಹತ್ತಿರ ಬರೆ ಕುಸಿದ ಘಟನೆ ವರದಿಯಾಗಿದೆ.
ಅಜ್ಜಾವರ ಗ್ರಾಮದ ದೊಡ್ಡೇರಿ ಬಸವನಪಾದೆ ನಿವಾಸಿ ಬಾಬು ಎಂಬುವವರ ಮನೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿತಗೊಂಡಿದೆ. ಮನೆಯ ಒಂದು ಭಾಗ ಧರಾಶಾಹಿಯಾಗಿದೆ. ಕಳೆದ ಭಾರಿ ಕೂಡ ಇವರ ಮನೆಗೆ ಹಾನಿಯಾಗಿತ್ತು. ಗ್ರಾಮ ಪಂಚಾಯತ್ ನಿಂದ ಹತ್ತು ಸಾವಿರ ಸಹಾಯಧನ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಇದೀಗ ಸದ್ಯ ಮನೆಗೆ ಟಾರ್ಪಲ್ ಹೊದಿಕೆ ಅಳವಡಿಸಲಾಗಿದೆ...
ಸುಳ್ಯ ನಗರದ ಹೃದಯ ಭಾಗವಾದ ಚೆನ್ನಕೇಶವ ದೇವರಕಟ್ಟೆಯ ಬಳಿಯ ತಾಹಿರಾ ಟೆಕ್ಸ್ ಟೈಲ್ಸ್ ಎದುರು ರಸ್ತೆಯ ಬದಿ ಬೃಹತ್ ಗುಂಡಿ ನಿರ್ಮಾಣವಾಗಿದೆ. ಪಾದಚಾರಿಗಳು ನಡೆದಾಡುವಲ್ಲೆ ಗುಂಡಿ ಬಾಯ್ದೆರೆದು ಕಾದು ಕುಳಿತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು ವಾರದ ಹಿಂದೆ ನಿರ್ಮಾಣವಾಗಿರುವ ಗುಂಡಿಯನ್ನು ಮುಚ್ಚುವ ಕೆಲಸಕ್ಕೆ ಇನ್ನಾದರೂ ಕೈ ಹಾಕುವರೇ ಎಂದು ಕಾದುನೋಡಬೇಕಿದೆ.
ಸೋಮವಾರ ಬೆಳಗ್ಗಿನಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿ ಕರಾವಳಿ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಈ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜು.24ರಂದು ಮತ್ತು 25 ಬೆಳಿಗ್ಗೆ ವರೆಗೆ ಭಾರೀ ಮಳೆ ಮುಂದುವರಿಯುವ ಸೂಚನೆ ಇದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ...
ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ತೆರಳುವ ಕುರುಂಜಿಭಾಗ್ ರಸ್ತೆಯಲ್ಲಿ ನೀರು ತುಂಬಿ ಸಂಕಷ್ಟ ಪಡಬೇಕಾಯಿತು. ನಗರ ಪಂಚಾಯತ್ ವ್ಯಾಪ್ತಿಯ ಕುರುಂಜಿ ಭಾಗ್ ರಸ್ತೆಯಲ್ಲಿರುವ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಯಿಂದಾಗಿ ಹೊಳೆಯಾಗಿ ಮಾರ್ಪಾಡಾಗಿ ವಾಹನಸವಾರರು ಪರದಾಡುವ ಪ್ರಸಂಗ ಉಂಟಾಯಿತು. ಇನ್ನಾದರೂ ನಗರ ಪಂಚಾಯತ್ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಳ್ಳುವುದೇ ಎಂದು ಕಾದು ನೋಡಬೇಕಿದೆ.
Loading posts...
All posts loaded
No more posts