Ad Widget

ಗುತ್ತಿಗಾರು : ಬೀದಿ ನಾಯಿ ಹಾವಳಿ – ಕ್ರಮಕ್ಕೆ ಒತ್ತಾಯ

ಗುತ್ತಿಗಾರು ಪೇಟೆಯಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು ದ್ವಿಚಕ್ರ ವಾಹನ ಸವಾರರು ಹಾಗೂ ಶಾಲಾ ಮಕ್ಕಳು ಭಯದಿಂದ ಸಾಗುವಂತಾಗಿದೆ. ಸುಮಾರು 30 ಕ್ಕೂ ಮಿಕ್ಕಿ ಬೀದಿ ನಾಯಿಗಳು ಪೇಟೆಯಲ್ಲಿ ಸುತ್ತುತ್ತಿದ್ದು ಗ್ರಾಮ ಪಂಚಾಯತ್ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಹಾಗೂ ವರ್ತಕರು ಒತ್ತಾಯಿಸಿದ್ದಾರೆ.

ಗುತ್ತಿಗಾರು : ದಾಖಲೆ ನಿರ್ಮಿಸಿದ ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಗೌರವರಾರ್ಪಣೆ

ಗೀಸಾ ಸಂಸ್ಥೆಯು ಅಂತಾರಾಷ್ಟ್ರೀಯ ಯೋಗ ವೈಡ್ ಬುಕ್ ದಿನಾಚರಣೆಯ ಪ್ರಯುಕ್ತ ವೈಲ್ಡ್ ಆಯೋಜಿಸಿದ ಬೆಸ್ಟ್ 10 ಆಸನ ಒಂದು ನಿಮಿಷದಲ್ಲಿ ಅತಿ ಹೆಚ್ಚು ಆಸನ ಮಾಡುವ ಮೂಲಕ ವಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿಗಳಾದ,...
Ad Widget

ಸುಳ್ಯ ತಾ.ಪಂ. ನೂತನ ಇ.ಒ. ರಾಜಣ್ಣ ಅಧಿಕಾರ ಸ್ವೀಕಾರ

ಸುಳ್ಯ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯಾಗಿ ರಾಜಣ್ಣ ಅವರು ಜು.28ರಂದು ಅಧಿಕಾರ ಸ್ವೀಕರಿಸಿದ್ದಾರೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಎನ್.ಭವಾನಿಶಂಕರ್ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಾ.ಪಂ. ಅಧಿಕಾರಿಗಳು‌ ಹಾಗೂ ಸಿಬ್ಬಂದಿಗಳು‌ ಉಪಸ್ಥಿತರಿದ್ದರು. ರಾಜಣ್ಣ ಅವರು‌ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಹಿಂದೆ ಅವರು ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅವರ...

ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮಂಜೂರಾದ ಅನುದಾನ ಹಿಂದಕ್ಕೆ ಹೋಗಿಲ್ಲ ಕೆ.ಪಿ.ಎಸ್ ಕಾರ್ಯಾಧ್ಯಕ್ಷ ಚಿದಾನಂದ ಕುದ್ಪಾಜೆ

2022-23ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 3 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಲಾ ರೂ. 85.37 ಲಕ್ಷದಂತೆ ಅನುದಾನ ಮಂಜೂರಾಗಿದೆ ಅದರಲ್ಲಿ ಸುಳ್ಯದ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮೂಲಭೂತ ಅಭಿವೃದ್ಧಿಗೆ 85 ಲಕ್ಷ ಅನುದಾನ ಮಂಜೂರಾತಿ ಆದೇಶಮಾಡಲಾಗಿದ್ದು, ಚುನಾವಣಾ ಸಂದರ್ಭದಲ್ಲಿ ಅನುದಾನ ಬಂದ ಹಿನ್ನಲೆಯಲ್ಲಿ ತಾಂತ್ರಿಕ ಕಾರಣದಿಂದ ಕಾಮಗಾರಿ...

ಸುಳ್ಯದಲ್ಲಿ ಸದ್ದಿಲ್ಲದೆ ಹೆಚ್ಚುತ್ತಿದೆ ಸೌಜನ್ಯ ಪರ ಹೋರಾಟದ ಕಿಚ್ಚು, ಸಮಾಲೋಚನೆ ಸಭೆ, ನ್ಯಾಯಕ್ಕಾಗಿ ಬ್ಯಾನರ್ ಅಳವಡಿಕೆಗೆ ನಿರ್ಧಾರ

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಎಂಬಲ್ಲಿ ನಡೆದ ಸೌಜನ್ಯ ಅತ್ಯಚಾರ ಮತ್ತು ಕೊಲೆಯ ಆರೋಪಿಗಳ ಪತ್ತೆಗಾಗಿ ಇದೀಗ ರಾಜ್ಯದೆಲ್ಲೆಡೆ ಕೂಗು ಕೇಳಿ ಬರುತ್ತಿದ್ದು ಇದೀಗ ಸುಳ್ಯದಲ್ಲಿಯು ಸೌಜನ್ಯ ಪರ ಹೋರಾಟದ ಕಿಚ್ಚು ಹೆಚ್ಚಾಗಿದೆ. ಸುಳ್ಯದ ಶಿವ ಕೃಪಾ ಕಲಾಮಂದಿರದಲ್ಲಿ ಸುಳ್ಯದ ದಲಿತಪರ ಸಂಘಟನೆಗಳ ನಾಯಕರು , ಕಾಂಗ್ರೆಸ್ ನಾಯಕ ಎಂ ವೆಂಕಪ್ಪ ಗೌಡ , ಜೆಡಿಎಸ್ ನಾಯಕರಾದ...

ಇಂದು ವಿಶ್ವ ಹೆಪಟೈಟಿಸ್ ದಿನ

ಜಾಗತಿಕವಾಗಿ ವಿಶ್ವದಾದ್ಯಂತ ಜುಲೈ 28ರಂದು “ವಿಶ್ವ ಹೆಪಟೈಟಿಸ್ ದಿನ” ಎಂದು ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಹೆಪಟೈಟಿಸ್ ರೋಗದ ಬಗ್ಗೆ ವಿಶೇಷವಾದ ಜಾಗ್ರತೆ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ ಜಾರಿಗೆ ತಂದಿದೆ. ಜಗತ್ತಿನಾದ್ಯಂತ ಸುಮಾರು 240 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದು ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ, ವರ್ಷವೊಂದರಲ್ಲಿ ಹೆಪಟೈಟಿಸ್...

ಚೆಂಬು : ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಊರುಬೈಲು ಚೆಂಬುವಿನಲ್ಲಿ ಮೆಂಡಾ ಪೌಂಡೇಷನ್ ಮತ್ತು ಎಸ್ & ಪಿ. ಗ್ಲೋಬಲ್ ಫೌಂಡೇಷನ್ (Menda Foundation and S & P Global Foundation) ನ ಪ್ರಾಯೋಜಕತ್ವದೊಂದಿಗೆ ಹಾಗೂ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಚೆಂಬು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಶಾಲೆಯಲ್ಲಿ "ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್"...

ಸಾಮಾಜಿಕ ನ್ಯಾಯ, ಸಮಪಾಲು ಸಮಬಾಳು ಸರಕಾರದ ಗುರಿ : ಪೆರಾಜೆಯಲ್ಲಿ ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಭಿಮತ

ಭರವಸೆಯ ಐದು ಗ್ಯಾರೆಂಟಿಗಳನ್ನು ಪೂರೈಸಿ ನುಡಿದಂತೆ ನಡೆದ ಸರಕಾರವಿದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರಕಾರ. 4 ಕೋಟಿ ಮನೆಗೆ ಗೃಹ ಲಕ್ಷ್ಮಿ ಯೋಜನೆಯಲ್ಲಿ ತಿಂಗಳಿಗೆ 2 ಸಾವಿರದಂತೆ ನೀಡಿದ ಸರಕಾರ ಪ್ರಪಂಚದಲ್ಲಿ ಇಲ್ಲ. ಸಮಪಾಲು- ಸಮಬಾಳು ಎಂಬಂತೆ ಸಾಮಾಜಿಕ ನ್ಯಾಯದಡಿಯಲ್ಲಿ ಜನರಿಂದ ತೆರಿಗೆರೂಪದಲ್ಲಿ ಸಂಗ್ರಹ ವಾದ ಹಣವನ್ನು ಜನರಿಗೆ ನಾನಾರೂಪದ ಯೋಜನೆ ಗಳ ಮೂಲಕ ಜನರಿಗೆ...

ಸುಳ್ಯದ ಸಮಸ್ಯೆಗಳಿಗೆ ಧ್ವನಿ ಎತ್ತದೇ ಶಾಸಕರ ಬಗ್ಗೆ ಜನ ಭ್ರಮ ನಿರಸನರಾಗಿದ್ದಾರೆ – ಅರ್ಹರಿಗೆ ಗೃಹಲಕ್ಷ್ಮಿ ಯೋಜನೆ ತಲುಪುವಂತಾಗಲು ಕಾಂಗ್ರೆಸ್ ಪ್ರಯತ್ನ : ಎಂ. ವೆಂಕಪ್ಪ ಗೌಡ

ಕಾಂಗ್ರೆಸ್ ಸರಕಾರ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯನ್ನು ನಗರ ವ್ಯಾಪ್ತಿಯಲ್ಲಿ ಅರ್ಹ ಪ್ರತಿ ಮನೆಗಳಿಗೆ ತಲುಪಿಸುತ್ತೇವೆ. ಹಾಗೂ ಸುಳ್ಯದ ಜನತೆಯ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತದೇ ಇರುವುದರಿಂದ ನಿರೀಕ್ಷೆ ಇಟ್ಟಿದ್ದ ಜನ ಭ್ರಮನಿರಶನಗೊಂಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಎಂ.ವೆಂಕಪ್ಪ ಗೌಡ ಹೇಳಿದರು. ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯ...

ಗ್ರಾಮ ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಯ ಚುನಾವಣೆಗೆ ದಿನ ನಿಗದಿ

ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುಣಾವಣಾ ದಿನ ನಿಗದಿಗೊಳಿಸಿ ಆದೇಶ ಪ್ರಕಟಗೊಂಡಿದೆ. ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ ಗಳಲ್ಲಿ ಮುಂದಿನ ಎರಡೂವರೆ ವರ್ಷಗಳ ಅಧ್ಯಕ್ಷ - ಉಪಾಧ್ಯಕ್ಷ ರ ಆಯ್ಕೆ ಚುನಾವಣಾಧಿಕಾರಿಗಳ ಆಯ್ಕೆಯಾಗಿದ್ದು ಚುನಾವಣಾ ದಿನಾಂಕವನ್ನು ನಿಗದಿ ಮಾಡಿ ಸುಳ್ಯ ತಹಶೀಲ್ದಾರ್ ಆದೇಶ ಮಾಡಿದ್ದಾರೆ. ಆಯಾ ಗ್ರಾಮ ಪಂಚಾಯತ್ ಗಳ...
Loading posts...

All posts loaded

No more posts

error: Content is protected !!