- Thursday
- November 28th, 2024
3 ದಿನಗಳ ಹಿಂದೆ ಹರಿಹರ ಪಲ್ಲತ್ತಡ್ಕ ಎಕ್ಸ್ ಚೇಂಜ್ ಬಳಿಯ ತೆಂಗಿನ ಮರಗಳನ್ನು ಹಾಳುಗೆಡವಿದ ಆನೆ ಮತ್ತೆಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು, ಕೊಪ್ಪಡ್ಕದಲ್ಲಿ ತೋಟಗಳಿಗೆ ಆನೆ ದಾಳಿ ಮಾಡಿದ ಘಟನೆ ಜು.12 ರಂದು ರಾತ್ರಿ ನಡೆದಿದೆ. ಮುಳ್ಳುಬಾಗಿಲು ಸುರೇಂದ್ರ ಎಂಬುವವರ ತೋಟದಲ್ಲಿ ಬಾಳೆ ಗಿಡಗಳನ್ನು ಹಾಳುಗೆಡವಿದ್ದು ನಂತರ ಮಾಧವ ಕೊಪ್ಪಡ್ಕ ಎಂಬುವವರ ತೋಟಕ್ಕೆ ಬಂದ ಆನೆ ಅಲ್ಲಿ...
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ನಿರ್ವಹಣೆ, ದಾರಿದೀಪ ಸಮಸ್ಯೆ ಕುಡಿಯುವ ನೀರಿನ ಪೈಪ್ ಲೈನ್ ಸಮಸ್ಯೆ, ಕೇರ್ಪಳದ ಹಿಂದೂ ರುಧ್ರಭೂಮಿ ನಿರ್ವಹಣೆ, ಪುರಭವನ ನಿರ್ವಹಣೆ, ಸಾರ್ವಜನಿಕ ಶೌಚಾಲಯ ಶುಚಿತ್ವ, ಮಳೆಗಾಲದ ಚರಂಡಿ ಸ್ವಚ್ಛತೆ ಸೇರಿದಂತೆ ತುರ್ತು ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಸುಳ್ಯದ ಕಾಂಗ್ರೆಸ್ ಮುಖಂಡರಾದ ಮಾಜಿ ನಗರ...
ಸುಳ್ಯ ತಾಲೂಕಿನಲ್ಲಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಆಚರಣೆ ಜು.19 ರಂದು ಬಂಟರ ಭವನ ಕೇರ್ಪಳ, ಸುಳ್ಯ ಇಲ್ಲಿ ನಡೆಯಲಿದ್ದು ಈ ಪ್ರಯುಕ್ತ ರಾಜ್ಯದ ವಿವಿಧ ಕಡೆ ಕಾರ್ಯನಿರ್ವಹಿಸುತ್ತಿರುವ ಸುಳ್ಯದ ಪತ್ರಕರ್ತರ ಸ್ನೇಹ ಸಂಗಮ ಸಂಜೆ 3ರಿಂದ ನಡೆಯಲಿದೆ. ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಪ್ರೆಸ್ ಕ್ಲಬ್...
ಆಲೆಟ್ಟಿ ಗ್ರಾಮ ಪಂಚಾಯತಿನ 2 ನೇ ವಾರ್ಡಿನ ಪೈಂಬೆಚ್ಚಾಲು ಎಂಬಲ್ಲಿ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿ ಕೂಳಿಯಡ್ಕ ನಾರಾಯಣ ಎಂಬವರ ಮನೆ ಪಕ್ಕದಲ್ಲಿ ಹರಿಯುತ್ತಿರುವ ತೋಡಿನ ಬದಿ ಕುಸಿತವಾಗಿದೆ. ಮಳೆ ಜೋರಾಗಿ ಸುರಿಯುವ ಸಂದರ್ಭದಲ್ಲಿ ವಿಪರೀತ ನೀರಿನ ಹರಿವು ಹೆಚ್ಚುವುದರಿಂದ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದ್ದು, ರಸ್ತೆಯ ಉಳಿವಿಗಾಗಿ ಕೂಡಲೇ ತಡೆಗೋಡೆ ನಿರ್ಮಿಸಬೇಕೆಂದು...
ಸುಳ್ಯದ ಶಾಂತಿನಗರದಲ್ಲಿರುವ ತಾಲೂಕು ಕ್ರೀಡಾಂಗಣ ಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಮೆದು ಕ್ರೀಡಾಂಗಣದ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರೊಬೇಷನರಿ ಡಿ.ಸಿ. ಎ.ಸಿ. ಮಹೇಶ್ ಚಂದ್ರ, ತಹಶೀಲ್ದಾರ್ ಮಂಜುನಾಥ್, ಆರ್.ಐ. ಕೊರಗಪ್ಪ ಹೆಗ್ಡೆ, ತಾಲೂಕು ಸರ್ವೆಯರ್ ಜಗದೀಶ್, ನಗರ ಪಂಚಾಯತ್ ಮುಖ್ಯಾಧಿಕಾರಿ...
ಜನರ ಸಮಸ್ಯೆ ಆಲಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ನಾನು ಪ್ರತೀ 15 ದಿನಗಳಿಗೊಮ್ಮೆ ಪ್ರತೀ ತಾಲೂಕು ಕಛೇರಿಗಳಿಗೆ ಭೇಟಿ ನೀಡುತ್ತೇನೆ. ಈ ವೇಳೆ ತಾಲೂಕಿನ ಸಾರ್ವಜನಿಕರು ನನ್ನನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಬಹುದು ಹಾಗೂ ದಿನಾಂಕವನ್ನು ಪತ್ರಿಕೆಯ ಮೂಲಕ ಜನರಿಗೆ ತಿಳಿಸಲು ಅಧಿಕಾರಿಗಳ ಮೂಲಕ ವ್ಯವಸ್ಥೆ ಕಲ್ಪಿಸುತ್ತೇನೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಅವರು...
ಸುಳ್ಯ ತಾಲೂಕಿನ ನಾನಾ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಲು ಇಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿಗಳಾದ ಡಾ. ಆನಂದ್ ಕೆ ಇವರು ಸುಳ್ಯದಲ್ಲಿ ಮಿಂಚಿನ ಸಂಚಾರ ನಡೆಸಿದರು. ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಘನತ್ಯಾಜ್ಯ ಘಟಕ , ಅಮೃತ ಉದ್ಯಾನ ವನ ಹಾಗೂ ಕೇಂದ್ರ ಸರಕಾರದ ಹರ್ ಘರ್ ಗಂಗಾ ಕಾರ್ಯಕ್ರಮದ ಕಾಮಗಾರಿಗಳು ಸೇರಿದಂತೆ ಇತರ...
ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಸುಳ್ಯ ತಾಲೂಕು ಕಚೇರಿಗೆ ಇಂದು ಭೇಟಿ ನೀಡಿ ಅಧಿಕಾರಿಗಳ ಜೊತೆ ಪ್ರಾಕೃತಿಕ ವಿಕೋಪಗಳ ಕುರಿತು ಸಭೆ ನಡೆಸಿದರು. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಸುಳ್ಯ ತಾಲೂಕಿಗೆ ಆಗಮಿಸಿದ್ದು, ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಇವರ ಜತೆಗೆ ಪ್ರೊಬೇಷನರಿ ಡಿಸಿ ಮುಕುಲ್ ಜೈನ್ ,...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆಯನ್ನು ಖಂಡಿಸಿ ಕಾಂಗ್ರೆಸ್ ದೇಶಾಧ್ಯಾಂತ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದು ಇದರ ಭಾಗವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ಮಿನಿ ವಿಧಾನಸಭಾ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುತ್ತಿ ದೆ. ಜು.12ರಂದು ಪೂ.10 ಗಂಟೆಯಿಂದ ಆರಂಭಗೊಡಿದ್ದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ...
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಕರ್ನಾಟಕ ಅರಣ್ಯ ಇಲಾಖೆ, ಸುಬ್ರಹ್ಮಣ್ಯ ಉಪವಿಭಾಗ, ಸುಬ್ರಹ್ಮಣ್ಯ ವಲಯ ಹಾಗೂ ಶಾಲಾಭಿವೃದ್ಧಿ ಸಮಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತ್ತಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಜು.11 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಿಹರ ಪಲ್ಲತ್ತಡ್ಕದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಲಯನ್ಸ್ ಕ್ಲಬ್...
Loading posts...
All posts loaded
No more posts