Ad Widget

ಸುಳ್ಯದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ವ ಪ್ರಯತ್ನ : ಭಾಗೀರಥಿ  ಮುರುಳ್ಯ

ಸುಳ್ಯದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಭಾರತೀಯ  ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕ  ಮತ್ತು ಸುಳ್ಯ ವಾಣಿಜ್ಯ  ಮತ್ತು ಕೈಗಾರಿಕೋದ್ಯಮಿಗಳ  ಸಂಘದ  ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸುಳ್ಯ ವರ್ತಕರ  ಸಮುದಾಯ ಭವನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವರ್ತಕ ಸಂಘದ  ಅಧ್ಯಕ್ಷ ಪಿ. ಬಿ....

ಸುಳ್ಯ : ಸೌತ್ ಕೊರಿಯಾದ ವಿಶ್ವ ಜಾಂಬೂರಿಗೆ ಸುಳ್ಯದ ಮನುಜ ನೇಹಿಗ ಮತ್ತು ಅಶ್ವಿನಿ  ಸರವು

ಸೌತ್ ಕೊರಿಯಾದಲ್ಲಿ ಆ.02 ರಿಂದ  ಆ.12 ರ ವರೆಗೆ ನಡೆಯುವ 25 ನೇ ಅಂತರಾಷ್ಟ್ರೀಯ ಸ್ಕೌಟ್-ಗೈಡ್ ಜಾಂಬೂರಿಯಲ್ಲಿ ಸುಳ್ಯದ ಸಾಂಸ್ಕೃತಿಕ ಪ್ರತಿಭೆಗಳಾದ ಮಾ| ಮನುಜ ನೇಹಿಗ ಮತ್ತು ಕು|ಅಶ್ವಿನಿ ಸರವು ಭಾಗವಹಿಸಲಿದ್ದಾರೆ. ಮನುಜ ನೇಹಿಗ ಸುಳ್ಯ ಎಳವೆಯಿಂದಲೇ ಯಕ್ಷಗಾನ, ರಂಗಭೂಮಿ, ಸಂಗೀತ, ನೃತ್ಯ, ಇಂದ್ರಜಾಲ , ಮಣಿಪುರಿ ಸ್ಟಿಕ್ ಡ್ಯಾನ್ಸ್ ಮುಂತಾದ ಬಹುಮುಖ ಪ್ರತಿಭೆಯನ್ನು ಹೊಂದಿರುವ...
Ad Widget

“ಕಂಡದ ಗೌಜಿ ಕೆಸರ್ದ ಪರ್ಬ ” ಆಮಂತ್ರಣ ಪತ್ರಿಕೆ ಬಿಡುಗಡೆ.

ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ಹಾಗೂ ಚೈತ್ರ ಯುವತಿ ಮಂಡಲ (ರಿ) ಅಜ್ಜಾವರ ಇದರ ಆಶ್ರಯದಲ್ಲಿ ಜುಲೈ 30ರಂದು ಅಜ್ಜಾವರ ವಿಷ್ಣುಮೂರ್ತಿ ಒತ್ತೆಕೋಲ ಗದ್ದೆಯಲ್ಲಿ ನಡೆಯಲಿರುವ ಎರಡನೇ ವರ್ಷದ ಕಂಡದ ಗೌಜಿ ಕೆಸರ್ದ್ ಪರ್ಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಮಹಿಷಮರ್ದಿನೀ ದೇವಸ್ಥಾನ ಅಜ್ಜಾವರ ಇದರ ಮುಂಭಾಗದಲ್ಲಿ ನಡೆಯಿತು. ಈ ಸಂದರ್ಭದಲ್ಲಿ...

ಕಲ್ಲಹಳ್ಳಿ ಪಾಣತ್ತೂರು ಬಾಟೋಳಿ ಎಂಬಲ್ಲಿ ಬರೆ ಕುಸಿದು ರಸ್ತೆ ಸಂಚಾರ ಸಂಪೂರ್ಣ ಬಂದ್

ಕಲ್ಲಪಳ್ಳಿ ಪಾಣತ್ತೂರು ಅಂತರ್ ರಾಜ್ಯ ಸಂಪರ್ಕಕಿಸುವ ರಸ್ತೆಯ ಬಾಟೋಳಿ ಎಂಬಲ್ಲಿ ಬೃಹದಾಕಾರದ ಬರೆ ಕುಸಿದು ರಸ್ತೆ ಮೇಲೆ ಮಣ್ಣು ಹಾಗೂ ಮರ ಬಿದ್ದು ವಾಹನ ಸಂಚಾರಕ್ಕೆ ವ್ಯತ್ಯಯವಾಗಿದೆ.ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಬರೆ ಕುಸಿಯತೊಡಗಿದ್ದು ಈ ಭಾಗದಲ್ಲಿ ಹಿಂದೆಯೂ ಬರೆ ಕುಸಿತಗೊಂಡಿತ್ತು ಎಂದು ತಿಳಿದುಬಂದಿದೆ.

ಸುಳ್ಯ : ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ

ಸುಳ್ಯ ತಾಲೂಕಿನಲ್ಲಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇಂದು ಬೆಳ್ಳಿ ಹಬ್ಬ ಸಂಭ್ರಮದಲ್ಲಿದ್ದು, ಬಂಟರ ಭವನ ಕೇರ್ಪಳದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ಸುಮನಾ ರಾವ್ ಪುತ್ತೂರು ಮತ್ತು ಬಳಗದಿಂದ ಸುಗುಮ ಸಂಗೀತ ಕಾರ್ಯಕ್ರಮ ಆರಂಭಗೊಂಡಿದೆ.

ಸುಳ್ಯದಲ್ಲಿ ಬೀಸಿದ ಭಾರಿ ಗಾಳಿ – ಹಾರಿದ ಮೇಲ್ಚಾವಣಿ

ಸುಳ್ಯದ ಅಂಬಟೆಡ್ಕದಲ್ಲಿರುವ ವಿದ್ಯುತ್ ಗುತ್ತಿಗೆದಾರರ ಸಂಘದ ವಾಣಿಜ್ಯ ಸಂಕೀರ್ಣದ ಮೇಲೆ ಅಳವಡಿಸಿದ್ದ ಅಲ್ಯೂಮಿನಿಯಂ ಶೀಟಿನಿಂದ ನಿರ್ಮಿಸಿದ ಛಾವಣಿ ಬೀಸಿದ ಭಾರಿ ಗಾಳಿಗೆ ಹಾರಿ ಕಂದಾಯ ಇಲಾಖೆಯ ಹೋಬಳಿ ಕಛೇರಿ ಎದುರಿಗೆ ಬಿದ್ದಿದೆ. ಈ ವೇಳೆ ಅಲ್ಲಿ ಯಾರು ಇಲ್ಲದಿದ್ದುದರಿಂದ ಸಂಭಾವ್ಯ ಅಪಾಯ ತಪ್ಪಿದೆ.

ಸುಳ್ಯ ಮಂಡೆಕೋಲು ರಸ್ತೆಗೆ ಅಡ್ಡಲಾಗಿ ಬಿದ್ದ ಮರ , ರಸ್ತೆ ಸಂಚಾರ ವ್ಯತ್ಯಯ

ಸುಳ್ಯದಿಂದ ಮಂಡೆಕೋಲಿಗೆ ತೆರಳುವ ರಸ್ತೆಗೆ ಬೃಹದಾಕಾರದ ಗಾಳಿಮರವೊಂದು ಅಡ್ಡಲಾಗಿ ಬಿದ್ದಿ ರಸ್ತೆ ಸಂಚಾರ ಅಡಚಣೆಯಾಗಿದೆ. ಕಾಂತಮಂಗಲದ ಜೀಜಬಾಯಿ ವೃತ್ತದ ಬಳಿ ಈ ಮರ ಬುಡಸಮೇತ ರಸ್ತೆಗೆ ಮಗುಚಿಬಿದ್ದಿದ್ದು , ವಿಧ್ಯುತ್ ತಂತಿಗಳು ಕಟ್ಟಾಗಿದ್ದು ಇದೀಗ ಮೆಸ್ಕಾಂ ಹಾಗೂ ಊರಿನವರ ಸಹಾಯದಲ್ಲಿ ಮರ ತೆರವು ಕಾರ್ಯ ನಡೆಯುತ್ತಿದೆ.

ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಮಮತಾ ಕೆ ರವರಿಗೆ ಡಾಕ್ಟರೇಟ್ ಪದವಿ

ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಮಮತಾ ಪುರುಷೋತ್ತಮ ಇವರ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಇವರು ಡಾ. ಶಂಕರ ನಾರಣಪ್ಪ, ಅಸೋಸಿಯೇಟ್ ಪ್ರೊಫೆಸರ್, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮೈಸೂರು ಇವರ ಮಾರ್ಗದರ್ಶನದಲ್ಲಿ “Role of Women members...

ಇನ್ನೂ ದೇವಸ್ಥಾನಗಳ ಒಳಗಡೆ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ತಮಿಳುನಾಡಿನ ಬಳಿಕ ಕರ್ನಾಟಕದ ದೇವಸ್ಥಾನಗಳ ಒಳಗಡೆ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ಮೊಬೈಲ್ ಫೋನ್ ಬಳಕೆ ನಿಷೇಧದ ಬಗ್ಗೆ ಮೊದಲಿನಿಂದಲೂ ಚರ್ಚೆ ನಡೆಯುತ್ತಿತ್ತು.ಈಗ ಅಧಿಕೃತವಾಗಿ ಮೊಬೈಲ್‌ ಫೋನ್‌ ಬಳಕೆಗೆ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿಷೇಧ ಹೇರಿ...

ಕನಕಮಜಲು ದರೋಡೆ ಪ್ರಕರಣ – ಎಡಿಷನಲ್ ಎಸ್ಪಿ ಭೇಟಿ – ಶೀಘ್ರ ಬಂಧನದ ಭರವಸೆ

ಕನಕಮಜಲು ಗ್ರಾಮದ ಬುಡ್ಲೆಗುತ್ತು ಯುರೇಶ್ ಎಂಬವರ  ಮನೆಯಲ್ಲಿ ಚಿನ್ನಾಭರಣ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶ್ವಾನ ದಳ ಆಗಮನ ಪೊಲೀಸ್ ಶ್ವಾನದಳದ ಶ್ವಾನ ಆಗಮಿಸಿ, ಮನೆಯೊಳಗೆ ಹೋಗಿ ಅಲ್ಲಿಂದ ಹೊರಬಂದು ಸುಣ್ಣಮೂಲೆ ರಸ್ತೆಯಾಗಿ ವಿಷ್ಣುಮೂರ್ತಿ ಒತ್ತೆಕೋಲದ ದ್ವಾರದ ತನಕ ಓಡಿ ಹಿಂತಿರುಗಿತೆಂದು ತಿಳಿದುಬಂದಿದೆ. ಸಂಜೆ ವೇಳೆಗೆ ಸ್ಥಳಕ್ಕೆ ಮಂಗಳೂರಿನಿಂದ...
Loading posts...

All posts loaded

No more posts

error: Content is protected !!