ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘದ ವತಿಯಿಂದ ಗಾಣಿಗ ಸಮ್ಮಿಲನ ಕಾರ್ಯಕ್ರಮವು ಅಕ್ಟೋಬರ್ 1 ರಂದು ಹಾಗೂ ಪೆರ್ಣೆ ಕ್ಷೇತ್ರದಲ್ಲಿ 2024 ಪೆಬ್ರವರಿ ರಲ್ಲಿ ಕಳಿಯಾಟ ಮಹೋತ್ಸವ ಹಿನ್ನಲೆಯಲ್ಲಿ ಮನೆಗೊಂದು ಸಸಿ ನೆಡುವ ಕಾರ್ಯಕ್ರಮವು ಅಗಸ್ಟ್ 20ರಂದು ನಡೆಯಲಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಸಲುವಾಗಿ ಪೂರ್ವಬಾವಿ ಸಭೆಯು ಸುಳ್ಯದ ದುರ್ಗಾಪರಮೇಶ್ವರಿ ಕಲಾ ಮಂದಿರ ಕೇರ್ಪಳದಲ್ಲಿ ನಡೆಯಿತು. “ಗಾಣಿಗ ಸಮ್ಮಿಲನ” ಕಾರ್ಯಕ್ರಮವನ್ನು ತಾಲೂಕಿನಲ್ಲಿಯೇ ಮಾದರಿ ಕಾರ್ಯಕ್ರಮವನ್ನಾಗಿಸುವ ಹಿನ್ನಲೆಯಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ, ಬೈಲುವಾರು ಸಮಿತಿ, ಮಹಿಳಾ ಸಮಿತಿ, ಹಾಗೂ ಸಮುದಾಯ ಬಾಂಧವರ ಪೂರ್ವಭಾವಿ ಸಭೆ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ಇತರೆ ಸಮಿತಿಗಳನ್ನು ರಚಿಸಿ ಹಂಚಿಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ದಾಮೋದರ ಪಾಟಾಳಿ ಪುತ್ತೂರು , ಮಾಲಿಂಗ ಭಾಜರತೊಟ್ಟಿ , ಶಂಕರ ಪಾಟಾಳಿ ನಿವೃತ್ತ ಶಿಕ್ಷಣ ಅಧಿಕಾರಿಗಳು ಸುಳ್ಯ ,ಸುರೇಶ್ ಕರ್ಲಪ್ಪಾಡಿ , ಪೂರ್ಣಿಮಾ ಸೂಂತೋಡು , ಪ್ರವೀಣ್, ವೆಂಕಟ್ರಮಣ ಬೇರ್ಪಡ್ಕ , ಶಿವಪ್ರಸಾದ್ ಪೇರಾಲು , ಅನುತಾ ಕರ್ಲಪ್ಪಾಡಿ , ರಾಧಾಕೃಷ್ಣ ಬೇರಪ್ಪಡ್ಕ , ಸಚಿತ್ ಕಲ್ಮಡ್ಕ , ಕೇಶವ ಮೊರಂಗಲ್ಲು , ಚಂದ್ರಶೇಖರ ಪನ್ನೆ , ಬಾಲಚಂದ್ರ ಅಡ್ಕಾರ್ , ರಮೇಶ್ ಇರಂತಮಜಲು , ಗೋಪಾಲಕೃಷ್ಣ ಮೊರಂಗಲ್ಲು ಸೇರಿದಂತೆ ಪದಾಧಿಕಾರಿಗಳು ಸಮಾಜ ಭಾಂಧವರು ಸಭೆಯಲ್ಲಿ ಉಪಸ್ಥಿತರಿದ್ದರು.