

ಎಲಿಮಲೆ ಸರಕಾರಿ ಪ್ರೌಢಶಾಲೆ ಎಲಿಮಲೆಯಿಂದ ವರ್ಗಾವಣೆಗೊಂಡಿರುವ ಹಿಂದಿ ಭಾಷಾ ಶಿಕ್ಷಕರಾದ ವಿರೂಪಾಕ್ಷಪ್ಪ ಎಂಪಿ ಅವರಿಗೆ ಅಭಿನಂದನೆ ಹಾಗೂ ಬೀಳ್ಕೊಡುಗೆ ಸಮಾರಂಭ ಜು.31 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷರಾದ ಜಯಂತ ಹರ್ಲಡ್ಕ ಇವರು ವಹಿಸಿದ್ದರು. ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಶೈಲೇಶ್ ಅಂಬೆಕಲ್ಲು ಮತ್ತು ಶ್ರೀಮತಿ ಪ್ರೇಮಲತಾ ದಿನೇಶ್ ಕೇರ, ನಿವೃತ್ತ ಮುಖ್ಯ ಶಿಕ್ಷಕರಾದ ದಯಾನಂದ ಎನ್ ಕೆ ಮತ್ತು ಚಂದ್ರಶೇಖರ ಪೇರಾಲು, ಅಜ್ಜಾವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಗೋಪಿನಾಥ ಎಂ, ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕಿರಣ ಗುಡ್ಡಮನೆ ಭಾಗವಹಿಸಿದ್ದರು. ಈ ಸಂದರ್ಭ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿರೂಪಾಕ್ಷಪ್ಪ ಎಂ ಪಿ ಇವರು ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ 2001 ನೇ ಇಸವಿಯಿಂದ ಇಲ್ಲಿಯವರೆಗೆ ಸುದೀರ್ಘ 22 ವರ್ಷಗಳ ಕಾಲ ಹಿಂದಿ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಇದೀಗ ಹಾಸನ ಜಿಲ್ಲೆಯ ಕೆ.ಪಿ.ಎಸ್. ಹಳೆಬೀಡಿಗೆ ವರ್ಗಾವಣೆಗೊಂಡಿರುತ್ತಾರೆ.
