
ಕಳಂಜ ಗ್ರಾಮದ ಮಣಿಮಜಲು ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಲೈನ್ ಗಳಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳನ್ನು ಕಡಿಯುವ ಕಾರ್ಯ ಜು.30ರಂದು ನಡೆಯಿತು. ಈ ಶ್ರಮದಾನದಲ್ಲಿ ಮೆಸ್ಕಾಂ ಸಿಬ್ಬಂದಿಗಳಾದ ಕಿಶೋರ್, ಪ್ರವೀಣ್, ಕಳಂಜ ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಬೇರಿಕೆ, ಸ್ಥಳೀಯರಾದ ಜಮಾಲ್ ಮಣಿಮಜಲು, ಫಾರೂಕ್, ವರ್ಣಿತ್, ಗೋವಿಂದ ನಾಯ್ಕ, ಸಂಜೀವ, ಪ್ರಶಾಂತ್, ಶರೀಫ್ ಮಣಿಮಜಲು, ಮಹೇಶ್ ಹಾಗೂ ಊರವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮಣಿಮಜಲು ಭಾಗದಲ್ಲಿ ಕೆಟ್ಟು ಹೋಗಿದ್ದ ಟ್ರಾನ್ಸ್ ಫಾರ್ಮರ್ ನ್ನು ದುರಸ್ತಿಗೊಳಿಸಲಾಯಿತು.
