Ad Widget

ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಅವರಿಗೆ ಗೌರವ ಡಾಕ್ಟರೇಟ್

ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡುರವರ ಕೃಷಿ ಕ್ಷೇತ್ರದ ಸಾಧನೆ ಮತ್ತು ಸಮಾಜ ಸೇವಾಕಾರ್ಯವನ್ನು ಗುರುತಿಸಿ ಏಶ್ಯಾಕಲ್ಟರಲ್ ಎಂಡ್ ಸಂಶೋಧನಾ ಅಕಾಡೆಮಿ ಗೌರವ ಡಾಕ್ಟರೇಟ್ ನೀಡಿದೆ. ಬೆಂಗಳೂರು ಹೊಸೂರು ರಸ್ತೆಯಲ್ಲಿರುವ ಹೊಟೇಲ್ ಕ್ಲರೆಸ್ಟಾ ಇಂಟರ್ ನ್ಯಾಶನಲ್ ನ ಸೆಮಿನಾರ್ ಹಾಲ್‌ನಲ್ಲಿ ಜು. 29ರಂದು ನಡೆದ ಸಮಾರಂಭದಲ್ಲಿ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

. . . . .

ಒನ್ ಇಂಡಿಯಾ, ಗ್ರೇಟ್ ಇಂಡಿಯಾ ಸಂಸ್ಥೆಯಿಂದ ಜೈಜವಾನ್ ಜೈಕಿಸಾನ್ ಅವಾರ್ಡ್ ಪಡೆದಿರುವ ಇವರು 1980ರಿಂದ 1997ರ ತನಕ ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿಯ ಬಳಿಕ ಆಧುನಿಕ ತಂತ್ರಜ್ಞಾನ ಬಳಸಿ ಸಾವಯವ ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ವಾಸವಾಗಿರುವ ಇವರು ಮೂಲತಃ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಕಾಂಚೋಡು ಕೆ.ಜಿ. ಸುಬ್ರಾಯ ಭಟ್ ಮತ್ತು ಶ್ರೀಮತಿ ಕೆ.ಎಸ್. ದೇವಮ್ಮ ದಂಪತಿಯ ಪುತ್ರ.

ಪತ್ನಿ ಸುಲೋಚನಾ ಕಾಂಚೋಡು ಗೃಹಿಣಿ ಮಗಳು ದೀಪ್ತಿ (ಖಗೋಳಶಾಸ್ತ್ರ) ಅಳಿಯ ಶುಭಮಯಿ ಚಟರ್ಜಿ ಅಮೇರಿಕಾದಲ್ಲಿ ವಿಜ್ಞಾನಿಯಾಗಿದ್ದಾರೆ. ಮಗ ಸುದಿನ ಕುಮಾರ್ ಕಾಂಚೋಡು  ಕಂಪ್ಯೂಟರ್ ಸೈನ್ಸ್ ನಲ್ಲಿ ಸೈಬರ್ ಸೆಕ್ಯೂರಿಟಿ ವಿಷಯದಲ್ಲಿ ಪಿ.ಎಚ್.ಡಿ ವ್ಯಾಸಂಗ ಮಾಡುತ್ತಿದ್ದಾರೆ. ಸೊಸೆ ಪೂರ್ವಿ ಸುದಿನಕುಮಾರ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಬೆಂಗಳೂರು ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!