

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಎಂಬಲ್ಲಿ ನಡೆದ ಸೌಜನ್ಯ ಅತ್ಯಚಾರ ಮತ್ತು ಕೊಲೆಯ ಆರೋಪಿಗಳ ಪತ್ತೆಗಾಗಿ ಇದೀಗ ರಾಜ್ಯದೆಲ್ಲೆಡೆ ಕೂಗು ಕೇಳಿ ಬರುತ್ತಿದ್ದು ಇದೀಗ ಸುಳ್ಯದಲ್ಲಿಯು ಸೌಜನ್ಯ ಪರ ಹೋರಾಟದ ಕಿಚ್ಚು ಹೆಚ್ಚಾಗಿದೆ. ಸುಳ್ಯದ ಶಿವ ಕೃಪಾ ಕಲಾಮಂದಿರದಲ್ಲಿ ಸುಳ್ಯದ ದಲಿತಪರ ಸಂಘಟನೆಗಳ ನಾಯಕರು , ಕಾಂಗ್ರೆಸ್ ನಾಯಕ ಎಂ ವೆಂಕಪ್ಪ ಗೌಡ , ಜೆಡಿಎಸ್ ನಾಯಕರಾದ ಸುಕುಮಾರ್ ಕೊಡ್ತುಗುಳಿ, ರೈತ ಮುಖಂಡ ಲೋಲಜಾಕ್ಷ ಬೂತಕಲ್ಲು ಸೇರಿದಂತೆ ಸುಳ್ಯದ ಹಲವಾರು ಹಿರಿಯ ಹಾಗೂ ಸಾಮಾಜಿಕ ಹೋರಾಟಗಾರು ಈ ಸಭೆಯಲ್ಲಿ ಭಾಗವಹಿಸಿದ್ದು ಸೋಮವಾರ ಮತ್ತೆ ಎರಡನೇ ಹಂತದ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಸೋಮವಾರ ನಡೆಯಲಿರುವ ಸಭೆಗೆ ಸಮಾನ ಮನಸ್ಕರು ಹಾಗೂ ಎಲ್ಲಾ ರಾಜಕೀಯ ನಾಯಕರುಗಳು ಭಾಗವಹಿಸುವಂತೆ ಲೋಲಾಜಾಕ್ಷ ಬೂತುಕಲ್ಲು ತಿಳಿಸಿದ್ದಾರೆ.