ಭರವಸೆಯ ಐದು ಗ್ಯಾರೆಂಟಿಗಳನ್ನು ಪೂರೈಸಿ ನುಡಿದಂತೆ ನಡೆದ ಸರಕಾರವಿದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರಕಾರ. 4 ಕೋಟಿ ಮನೆಗೆ ಗೃಹ ಲಕ್ಷ್ಮಿ ಯೋಜನೆಯಲ್ಲಿ ತಿಂಗಳಿಗೆ 2 ಸಾವಿರದಂತೆ ನೀಡಿದ ಸರಕಾರ ಪ್ರಪಂಚದಲ್ಲಿ ಇಲ್ಲ. ಸಮಪಾಲು- ಸಮಬಾಳು ಎಂಬಂತೆ ಸಾಮಾಜಿಕ ನ್ಯಾಯದಡಿಯಲ್ಲಿ ಜನರಿಂದ ತೆರಿಗೆರೂಪದಲ್ಲಿ ಸಂಗ್ರಹ ವಾದ ಹಣವನ್ನು ಜನರಿಗೆ ನಾನಾರೂಪದ ಯೋಜನೆ ಗಳ ಮೂಲಕ ಜನರಿಗೆ ತಲುಪಿಸುವ ಕೆಲಸ ಕಾಂಗ್ರೆಸ್ ನೇತ್ರತ್ವದ ಸಿದ್ದರಾಮಯ್ಯ ಸರಕಾರದ ಮೂಲಕ ಆಗಿದೆ. ಇಂತಹ ಐತಿಹಾಸಿಕ ನಿರ್ಧಾರ ನಮ್ಮ ಸರಕಾರದಿಂದ ಆಗಿದೆ ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ.
ಜು.27ರಂದು ಪೆರಾಜೆ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಕಾಂಗ್ರೆಸ್ ಸಮಿತಿ ಪೆರಾಜೆ ಮತ್ತು ಸಾರ್ವಜನಿಕ ರಿಂದ ಅಭಿನಂದನೆಯನ್ನು ಸ್ವೀಕರಿಸಿ, ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾತನಾಡಿದರು.
ಮುಖ್ಯ ಅತಿಥಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಮಾತನಾಡಿ, ಪೆರಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರ ಮೇಲೆ ಪಕ್ಷದ ಚಟುವಟಿಕೆ ಗಳಲ್ಲಿ ಭಾಗಿಯಾದರೆ, ಬಿಜೆಪಿ ಪಕ್ಷದ ನಾಯಕರಿಂದ ದಬ್ಬಾಳಿಕೆ ಮಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕರಾದ ತಾವುಗಳು ಭೇಟಿನೀಡಿ ಕಾರ್ಯಕರ್ತ ರ ಅಹವಾಲುಗಳನ್ನು ಆಲಿಸಿ, ಧೈರ್ಯ ನೀಡಬೇಕು. ಇದರಿಂದ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು ಎಂದರು.
ಜಿಲ್ಲಾ ಕಾಂಗ್ರೆಸ್ ಕೊಡಗು ಸಮಿತಿ ಅಧ್ಯಕ್ಷ ಧರ್ಮ ಜೋತಪ್ಪ, ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸಾಮಾಜಿಕ ಜಾಲತಾಣ ಅಧ್ಯಕ್ಷ ಸೂರಜ್ ಹೊಸೂರು, ಮಹಿಳಾ ಬ್ಲಾಕ್ ಸಮಿತಿಯ ರಾಜೇಶ್ವರಿ, ಮುಖಂಡ ತೆನ್ನೀರಾ ಮೈನಾ, ಮುಖಂಡರಾದ ಉಮೇಶ ಕುಂಬಳಚೇರಿ, ಸಂಪಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪಿ.ಎಲ್ ವೇದಿಕೆಯಲ್ಲಿ ಇದ್ದರು.
ಪೆರಾಜೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಯರಾಮ ಪೆರುಮುಂಡ ಅಧ್ಯಕ್ಷತೆಯನ್ನು ವಹಿಸಿದರು.
ಪೆರಾಜೆ ಗ್ರಾ.ಪಂ. ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಸುರೇಶ್ ಪೆರುಮುಂಡ ಸ್ವಾಗತಿಸಿದರು.
ನಿರಾಜ್ ಪಾಲಡ್ಕ ಮತ್ತು ಲಿಮಿತ ಪೆರುಮುಂಡ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾರ್ವಜನಿಕ ರಿಂದ ಅಭಿನಂದನಾ ಕಾರ್ಯಕ್ರಮ ನಡೆದು, ಅಹವಾಲು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ ಗೊಂಡರು.