2022-23ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 3 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಲಾ ರೂ. 85.37 ಲಕ್ಷದಂತೆ ಅನುದಾನ ಮಂಜೂರಾಗಿದೆ ಅದರಲ್ಲಿ ಸುಳ್ಯದ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಮೂಲಭೂತ ಅಭಿವೃದ್ಧಿಗೆ 85 ಲಕ್ಷ ಅನುದಾನ ಮಂಜೂರಾತಿ ಆದೇಶಮಾಡಲಾಗಿದ್ದು, ಚುನಾವಣಾ ಸಂದರ್ಭದಲ್ಲಿ ಅನುದಾನ ಬಂದ ಹಿನ್ನಲೆಯಲ್ಲಿ ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬವಾಗಿರುತ್ತದೆ. ನಮ್ಮ ಶಾಲೆಗೆ ಬಂದ ಅನುದಾನವು ಯಾವುದೇ ಕಾರಣಕ್ಕೂ ವಾಪಾಸ್ ಹೋಗಿರುವುದಿಲ್ಲ ಎಂದು ಹೇಳಿದರಲ್ಲದೆ ಇನ್ನು ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ ಎಂದು ಇಲಾಖೆಗಳಲ್ಲಿ ವಿಚಾರಿಸಿದಾಗ ತಿಳಿಸಿರುತ್ತಾರೆ ಎಂದು ಕೆ.ಪಿ.ಎಸ್ ಕಾರ್ಯಾಧ್ಯಕ್ಷರಾದ ಚಿದಾನಂದ ಕುದ್ಪಾಜೆ ತಿಳಿಸಿದ್ದಾರೆ.
- Thursday
- November 21st, 2024