Ad Widget

ಸುಳ್ಯದಲ್ಲಿ ಕಾರ್ಗಿಲ್ ವಿಜಯ್ ದಿವಸ – ತ್ಯಾಗ ಬಲಿದಾನ ಮಾಡಿದ ವೀರ ಯೋಧರಿಗೆ ನಮನ

ಸುಳ್ಯದ ರಾಷ್ಟ್ರಾಭಿಮಾನಿಗಳ ಬಳಗದ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ಯೋಧ ನಮನ ಕಾರ್ಯಕ್ರಮ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ಜು.26 ರಂದು ನಡೆಯಿತು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ದೇಶಕ್ಕಾಗಿ ಹೋರಾಡಿದ ವೀರ ಸೈನಿಕರ ತ್ಯಾಗ ಬಲಿದಾನ ಸ್ಮರಿಸಿ ವೀರ ಯೋಧರಿಗೆ ನಮನ ಸಲ್ಲಿಸಲಾಯಿತು.

. . . . . . . . .

ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜಗದೀಶ್ ಕೆ.ಪಿ ಯವರು ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ನಿವೃತ್ತ ಸೈನಿಕ ಅಡ್ಡಂತಡ್ಕ ದೇರಣ್ಣ ಗೌಡ ರವರು ದೀಪ ಪ್ರಜ್ವಲಿಸಿದರು.

. . . . . . .

ರಾಷ್ಟ್ರಾಭಿಮಾನಿಗಳ ಬಳಗದ ಸದಸ್ಯ ಅಥ್ಲೆಟ್ ವಿನಯ್ ನಾರಾಲು ಸ್ವಾಗತಿಸಿದರು.
ಪ್ರಶಾಂತ್ ಕುತ್ತಮೊಟ್ಡೆ ಪ್ರಾಸ್ತಾವಿಕ ಮಾತನಾಡಿದರು. ಮನೀಶ್ ವಂದಿಸಿದರು. ಪ್ರಸಾದ್ ಕಾಟೂರು ಮತ್ತು ಉದಯ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.
ತಾಲೂಕಿನ ನಿವೃತ್ತ ಸೈನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು,ವಿವಿಧ ಪಕ್ಷದ ಪ್ರಮುಖರು, ಸ್ಥಳೀಯ ನಾಗರಿಕರು ಭಾಗವಹಿಸಿದ್ದರು. ಬಳಿಕ ಸ್ಥಳೀಯ ಗಾಯಕರಿಂದ ದೇಶ ಭಕ್ತಿ ಗಾಯನ ಕಾರ್ಯಕ್ರಮ ನಡೆಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading