
ಅಜ್ಜಾವರ ಗ್ರಾಮದ ಕಾಂತಮಂಗಲ ಪ್ರಾಥಮಿಕ ಶಾಲೆಯಲ್ಲಿ ಅಪರಿಚಿತ ವ್ಯಕ್ತಿ ಅನಾರೋಗ್ಯದಿಂದ ಇರುವುದನ್ನು ಗಮನಿಸಿದ ಸ್ಥಳೀಯರು ಪ್ರಗತಿ ಆ್ಯಬುಲೆನ್ಸ್ ಅಚ್ಚುನವರಿಗೆ ಮಾಹಿತಿ, ಅವರ ಸಹಕಾರದಿಂದ ಅಂಬ್ಯುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಹೆಸರು ಪದ್ಮನಾಭ ಎಂದು ತಿಳಿದುಬಂದಿದ್ದು, ಹೆಚ್ಚಿನ ವಿವರ ಲಭ್ಯವಾಗಿಲ್ಲ. ಅವರ ಮನೆಯವರು ಅಥವಾ ವಾರಿಸುದಾರರು ಯಾರಾದರೂ ಇದ್ದರೇ ಆಸ್ಪತ್ರೆಗೆ ಆಗಮಿಸುವಂತೆ ವಿನಂತಿಸಲಾಗಿದೆ.
