Ad Widget

ಮುಖ್ಯ ಮಂತ್ರಿ ಚಿನ್ನದ ಪದಕ ಪಡೆದ ಹಿರಿಯ ಗೃಹ ರಕ್ಷಕ ಹೂವಪ್ಪ ಕಣ್ಕಲ್ ನಿಧನ

ಬೆಳ್ಳಾರೆ ಗ್ರಹ ರಕ್ಷಕ ಘಟಕದ ಹಿರಿಯ ಸಿಬ್ಬಂದಿ ಕೇನ್ಯ ಗ್ರಾಮದ ಕಣ್ಕಲ್ ಹೂವಪ್ಪರು ಜು. 25ರಂದು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 55 ವರ್ಷ ವಯಸ್ಸಾಗಿತ್ತು. ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದ ಹೂವಪ್ಪರ ನಿಧನಕ್ಕೆ ದ.ಕ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರಾದ  ಡಾ. ಮುರಲಿ ಮೋಹನ್ ಚೂಂತಾರು ಸಂತಾಪ ವ್ಯಕ್ತಪಡಿಸಿದ್ದಾರೆ. ಹೂವಪ್ಪರು ಓರ್ವ ನಿಷ್ಠಾವಂತ, ಪ್ರಾಮಾಣಿಕ ಮತ್ತು ಮಾದರಿ ಗೃಹರಕ್ಷಕರಾಗಿದ್ದರು, ಅವರ ಸಾವಿನಿಂದ ಗೃಹ ರಕ್ಷಕ ಇಲಾಖೆ ಗೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದಿಸಿದ್ದಾರೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!