Ad Widget

ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಕ್ಷಣಗಣನೆ – ಚುನಾವಣಾಧಿಕಾರಿಗಳ ನೇಮಕ ಮಾಡಿ ಡಿಸಿ ಆದೇಶ

ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ ಗಳ ಮುಂದಿನ ಎರಡೂವರೆ ವರ್ಷಗಳ ಅಧ್ಯಕ್ಷ ಉಪಾಧ್ಯಕ್ಷ ರ ಆಯ್ಕೆಗಾಗಿ ಚುನಾವಣಾಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.

. . . . .

ಬೆಳ್ಳಾರೆ,ಪೆರುವಾಜೆ ಮತ್ತು ಕೊಡಿಯಾಲ ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಬೆಳ್ಳಾರೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ. ಕೆ,ಅಮರಮೂಡ್ನೂರು, ಬಾಳಿಲ ಹಾಗೂ ಕಳಂಜ ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಸುಳ್ಯ ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿಲ್ಲಾ ಪಂಚಾಯತ್ ಇಂಜಿನಿಯರ್ ಉಪ ವಿಭಾಗದ ಮಣಿಕಂಠನ್,ಮುರುಳ್ಯ,ಕಲ್ಮಡ್ಕ ಹಾಗೂ (ಐವತ್ತೊಕ್ಲು) ಪಂಜ ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಪಂಜ ವಲಯದ ಅರಣ್ಯಾಧಿಕಾರಿ ಮಂಜುನಾಥ. ಎನ್,ಕೊಲ್ಲಮೊಗ್ರು, ಹರಿಹರ ಪಲ್ಲತಡ್ಕ, ಗುತ್ತಿಗಾರು ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಸುಳ್ಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್. ಬಿ. ಇ,ದೇವಚಳ್ಳ, ಹಾಗೂ ನೆಲ್ಲೂರು – ಕೆಮ್ರಾಜೆ ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಸುಳ್ಯ ತಾಲೂಕಿನ ಸಹಾಯಕ ತೋಟಗಾರಿಕಾ ಅಧಿಕಾರಿ ಅರಬಣ್ಣ ಪುಜೇರಿ, ಐವರ್ನಾಡು, ಉಬರಡ್ಕ – ಮಿತ್ತೂರು ಹಾಗೂ ಆಲೆಟ್ಟಿ ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಸುಳ್ಯ ವಲಯ ಅರಣ್ಯಾಧಿಕಾರಿ ಗಿರೀಶ್. ಆರ್,ಮಡಪ್ಪಾಡಿ ಹಾಗೂ ಮರ್ಕಂಜ ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಸುಳ್ಯ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ, ಸಂಪಾಜೆ ಮತ್ತು ಅರಂತೋಡು ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಸುಳ್ಯ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ, ಸೂಫಿ ಪೆರಾಜೆ,ಕನಕಮಜಲು ಹಾಗೂ ಜಾಲ್ಸೂರು ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಸುಳ್ಯ ತಾಲೂಕಿನ ಸಹಾಯಕ ತೋಟಗಾರಿಕಾ ಅಧಿಕಾರಿ ಜಗದೀಶ್ ರುದ್ರೇಗೌಡ ಪಾಟೀಲ,ಅಜ್ಜಾವರ ಮತ್ತು ಮಂಡೆಕೋಲು ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಸುಳ್ಯ ಸರಕಾರಿ ಪದವಿ ಪೂರ್ವ ‌ಕಾಲೇಜು ಹಿರಿಯ ಶಿಕ್ಷಕ ಡಾ.ಸುಂದರ ಕೇನಾಜೆ ಅವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!