Ad Widget

ಬಿಡುವು ನೀಡದ ಮಳೆ, ದಕ್ಷಿಣ ಕನ್ನಡ ಜಿಲ್ಲಾ ಶಾಲೆಗಳಿಗೆ ರಜೆ ಮುಂದುವರಿಕೆ.

ಬಿಡುವು ನೀಡದ ಮಳೆ, ದಕ್ಷಿಣ ಕನ್ನಡ ಶಾಲೆಗಳಿಗೆ ನಾಳೆಯೂ ರಜೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಎಡಬಿಡದೇ ಸುರಿಯುತ್ತಿದ್ದು ರೆಡ್​ ಅಲರ್ಟ್ ಘೋಷಣೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರೆಡ್​ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಾಗಿ ದಕ್ಷಿಣ...

ಜು.27: ಮುಖ್ಯಮಂತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಪೆರಾಜೆಗೆ –  ಅಭಿನಂದನಾ ಸಮಾರಂಭ

ವಿರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ಪೆರಾಜೆಯಲ್ಲಿ ಕಾಂಗ್ರೆಸ್ ಸಮಿತಿ  ಮತ್ತು ಸಾರ್ವಜನಿಕ ರಿಂದ ಅಭಿನಂದನಾ ಸಮಾರಂಭ, ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಜು.27 ರಂದು  ಸಂಜೆ 4.30 ಕ್ಕೆ ನಡೆಯಲಿದೆ.  ಪೆರಾಜೆ ಗ್ರಾ.ಪಂ.ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕ ಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕೆಂದು ಪೆರಾಜೆ ಗ್ರಾ.ಪಂ. ಸದಸ್ಯ ಹಾಗೂ...
Ad Widget

ಮುಖ್ಯ ಮಂತ್ರಿ ಚಿನ್ನದ ಪದಕ ಪಡೆದ ಹಿರಿಯ ಗೃಹ ರಕ್ಷಕ ಹೂವಪ್ಪ ಕಣ್ಕಲ್ ನಿಧನ

ಬೆಳ್ಳಾರೆ ಗ್ರಹ ರಕ್ಷಕ ಘಟಕದ ಹಿರಿಯ ಸಿಬ್ಬಂದಿ ಕೇನ್ಯ ಗ್ರಾಮದ ಕಣ್ಕಲ್ ಹೂವಪ್ಪರು ಜು. 25ರಂದು ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 55 ವರ್ಷ ವಯಸ್ಸಾಗಿತ್ತು. ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದ ಹೂವಪ್ಪರ ನಿಧನಕ್ಕೆ ದ.ಕ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರಾದ  ಡಾ. ಮುರಲಿ ಮೋಹನ್ ಚೂಂತಾರು ಸಂತಾಪ...

ಆರಾಧನಾ ಪದ್ಧತಿಯನ್ನು ಮಕ್ಕಳಿಗೆ ಚಿಕ್ಕ ಪ್ರಾಯದಿಂದಲೇ ಕಲಿಸುವ ಪಾಲಕರು

✍️ ಭಾಸ್ಕರ ಜೋಗಿಬೆಟ್ಟು ತುಳುನಾಡು ಮತ್ತು ಕೇರಳ ಪ್ರದೇಶಗಳಲ್ಲಿ ಆರಾಧನಾ ಪದ್ಧತಿಗೆ ವಿಶೇಷವಾದ ಸ್ಥಾನ ಮಾನವಿದೆ. ಇಲ್ಲಿ ಅಲ್ಲಲ್ಲಿ ದೇವಸ್ಥಾನ ಮತ್ತು ದೈವಸ್ಥಾನಗಳು , ಬನಗಳು , ಕಟ್ಟೆಗಳನ್ನು ಕಾಣಬಹುದು. ಇಲ್ಲಿನ ಜನರಿಗೆ ನಂಬಿಕೆಯೆ ಮೂಲ ಆಧಾರವಾಗಿದ್ದು, ದೈವಗಳ ಆರಾಧನೆಯನ್ನು ಚಾಚು ತಪ್ಪದೆ ಪಾಲಿಸುತ್ತಾರೆ. ಹಿರಿಯರು ಪಾಲಿಸಿಕೊಂಡು ಬಂದಿರುವ ಆರಾಧನ ಪದ್ಧತಿಯನ್ನು ಕಿರಿಯರು ನೋಡಿ ಕಲಿತು...

ಸುಳ್ಯ : ಸಮಸ್ಯೆಗಳ ಸುಳಿಯಲ್ಲಿ ಶತಮಾನ ಕಂಡ ಸರಕಾರಿ ಶಾಲೆ – ಶಾಸಕರು, ಅಧಿಕಾರಿಗಳ ಭೇಟಿ

ಸುಳ್ಯದ ಜ್ಯೋತಿ ವೃತ್ತದ ಬಳಿಯ ಸರಕಾರಿ ಪ್ರಾಥಮಿಕ ಶಾಲೆಯ ಬಳಿ ಬರೆ ಜರಿದು ವಿದ್ಯಾರ್ಥಿನಿಯರ ಶೌಚಾಲಯ ಬಾಗಿಲು ಸಂಪೂರ್ಣವಾಗಿ ಮುಚ್ಚಲಾಗಿದೆ. ರಜೆ ಮುಗಿದ ಮೇಲೆ ವಿದ್ಯಾರ್ಥಿನಿಯರ ಪಾಡೇನು ಎಂಬ ಪ್ರಶ್ನೆ ಉದ್ಬವಿಸಿದೆ. ತಾಲೂಕು ಆಡಳಿತದ ಸಮೀಪದಲ್ಲೇ ಇರುವ ಶಾಲೆಗೆ ಇಂತಹ ದುಸ್ಥಿತಿಯಾದರೇ ಬೇರೆ ಶಾಲೆಗಳ ಗತಿಯೇನು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ. ಮಾಹಿತಿ ಪಡೆದ ಶಾಸಕಿ...

ಕಾಂತಮಂಗಲ : ಅನಾರೋಗ್ಯದಿಂದ ಬಳಲಿದ್ದ ಅಪರಿಚಿತ ವ್ಯಕ್ತಿಯ ಆಸ್ಪತ್ರೆ ದಾಖಲಿಸಿದ ಸ್ಥಳೀಯರು

ಅಜ್ಜಾವರ ಗ್ರಾಮದ ಕಾಂತಮಂಗಲ ಪ್ರಾಥಮಿಕ ಶಾಲೆಯಲ್ಲಿ ಅಪರಿಚಿತ ವ್ಯಕ್ತಿ ಅನಾರೋಗ್ಯದಿಂದ ಇರುವುದನ್ನು ಗಮನಿಸಿದ ಸ್ಥಳೀಯರು ಪ್ರಗತಿ ಆ್ಯಬುಲೆನ್ಸ್ ಅಚ್ಚುನವರಿಗೆ ಮಾಹಿತಿ, ಅವರ ಸಹಕಾರದಿಂದ ಅಂಬ್ಯುಲೆನ್ಸ್ ಮೂಲಕ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಹೆಸರು ಪದ್ಮನಾಭ ಎಂದು ತಿಳಿದುಬಂದಿದ್ದು, ಹೆಚ್ಚಿನ ವಿವರ ಲಭ್ಯವಾಗಿಲ್ಲ. ಅವರ ಮನೆಯವರು ಅಥವಾ ವಾರಿಸುದಾರರು ಯಾರಾದರೂ ಇದ್ದರೇ ಆಸ್ಪತ್ರೆಗೆ ಆಗಮಿಸುವಂತೆ ವಿನಂತಿಸಲಾಗಿದೆ.

ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಕ್ಷಣಗಣನೆ – ಚುನಾವಣಾಧಿಕಾರಿಗಳ ನೇಮಕ ಮಾಡಿ ಡಿಸಿ ಆದೇಶ

ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್ ಗಳ ಮುಂದಿನ ಎರಡೂವರೆ ವರ್ಷಗಳ ಅಧ್ಯಕ್ಷ ಉಪಾಧ್ಯಕ್ಷ ರ ಆಯ್ಕೆಗಾಗಿ ಚುನಾವಣಾಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಬೆಳ್ಳಾರೆ,ಪೆರುವಾಜೆ ಮತ್ತು ಕೊಡಿಯಾಲ ಗ್ರಾಮ ಪಂಚಾಯತ್ ಗೆ ಚುನಾವಣಾಧಿಕಾರಿಯಾಗಿ ಬೆಳ್ಳಾರೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ. ಕೆ,ಅಮರಮೂಡ್ನೂರು, ಬಾಳಿಲ ಹಾಗೂ ಕಳಂಜ...

ಅಮರ್ ರಹೇ ಜವಾನ್ : ಇಂದು ಕಾರ್ಗಿಲ್ ವಿಜಯ್ ದಿವಸ್

ಬರಹ : ಡಾ| ಮುರಲೀ ಮೋಹನ್ ಚೂಂತಾರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಜವಾನರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್‍ನಲ್ಲಿರುವ ಅಮರ್ ಜವಾನ ಜ್ಯೋತಿಯಲ್ಲಿ ಮೊಂಬತ್ತಿ ಹಚ್ಚಿ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ....

ಮಂಡೆಕೋಲಿನಲ್ಲಿ‌ ಅತೀ ಹೆಚ್ಚು ಮಳೆ ದಾಖಲೆ

ಅತೀ ಹೆಚ್ಚು‌ಮಳೆಯಾದ ಪ್ರದೇಶದಲ್ಲಿ‌ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮ ಎಂದು ಜು.25 ರಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ವರದಿ‌ ಮಾಡಿದೆ. ಮಂಡೆಕೋಲಿನಲ್ಲಿ 217 ಮಿ.ಮೀ, ಅರಂತೋಡು ಗ್ರಾಮದಲ್ಲಿ 185‌ಮಿ.ಮೀ ಹಾಗೂ ಬೆಳ್ಳಾರೆ ಯಲ್ಲಿ‌183.5 ಮಿ.ಮೀ. ಮಳೆಯಾಗಿದೆ.
error: Content is protected !!