Ad Widget

ಸುಳ್ಯ ತಾಲೂಕಿನ ಪಂಜ ಪೂಜಾಲಕ್ಷ್ಮಣ್ ಗೌಡ ಇವರಿಗೆ ಒಲಿದ ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ ಬಿರುದು

. . . . . . . . .

ಜು.23ರಂದು ಶ್ರೀ ಸಾಯಿ ಕಲ್ಯಾಣ ಮಂಟಪ ಬಾಗಲಗುಂಟೆ ಬೆಂಗಳೂರು.ಕರ್ನಾಟಕ ಜನಸ್ಪಂದನ ಟ್ರಸ್ಟ್ (ರಿ) ಕರ್ನಾಟಕ ರಾಜ್ಯ ಸಂಸ್ಥೆ ಟಿ.ದಾಸರಹಳ್ಳಿ ಬೆಂಗಳೂರು, ಹನುಮಂತಪ್ಪ ಎಸ್ ಮೇಡೆಗಾರ ರಾಜ್ಯಾಧ್ಯಕ್ಷರು ಇವರು ಹಮ್ಮಿಕೊಂಡ ಟ್ರಸ್ಟಿನ 6 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. .ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಶ್ರೀ ಪರಮಪೂಜ್ಯ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಮಸೂತಿ ವಿಜಯಪುರ ಜಿಲ್ಲೆ ಇವರು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರುಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯ ವ್ಯಕ್ತಿಗಳು ಮಾನ್ಯ ಶ್ರೀ ಎಸ್ ಮುನಿರಾಜು ಶಾಸಕರು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ, ಶಿಕಾರಿಪುರ ಕ್ಷೇತ್ರದ ಬಿ,ವೈ,ವಿಜಯೇಂದ್ರ, ಶ್ರೀ ವೈ ಬಿ ಎಚ್ ಜಯದೇವ್. ಅಧ್ಯಕ್ಷರು. ಕನ್ನಡ ಜನಪದ ಪರಿಷತ್ತು. ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ, ಇವರ ಎಲ್ಲರ ಸಮ್ಮುಖದಲ್ಲಿ “ಪೂಜಾಲಕ್ಷ್ಮಣ್ ಗೌಡ” ಇವರಿಗೆ ಜನಸ್ಪಂದನ ಕಲಾಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇವರು ಮಾಜಿ ಸೈನಿಕರಾದ ಲಕ್ಷ್ಮಣ ಗೌಡ ಬೇರ್ಯ ಮತ್ತು ರಾಜಶ್ರೀ ದಂಪತಿಗಳ ಮೂರನೇ ಮಗಳಾಗಿ ತುಳುನಾಡಿನಲ್ಲಿ ಜನಿಸಿದ ಇವರು ಸುಳ್ಯ ತಾಲೂಕಿನ ಪಂಜ ಗ್ರಾಮದ ಬೇರ್ಯದಲ್ಲಿ ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು ಪ್ರೌಢ ಶಿಕ್ಷಣವನ್ನು ವಿದ್ಯಾಬೋದಿನಿ ಶಾಲೆ ಬಾಳಿಲದಲ್ಲಿ ಕಲಿತರು.ಪಿಯುಸಿ ವಿದ್ಯಾಭ್ಯಾಸವನ್ನು ಶಾರದಾ ಮಹಿಳಾ ಕಾಲೇಜ್ ಸುಳ್ಯ, ಪದವಿ ಶಿಕ್ಷಣವನ್ನು ಪ್ರಥಮ ದರ್ಜೆ ಕಾಲೇಜ್ ಕೋಡಿಯಾಲ್ ಬೈಲ್ ಸುಳ್ಯದಲ್ಲಿ ಕಲಿತು ಪಿಜಿಡಿಸಿಸಿ ಕೋರ್ಸ್ ಅನ್ನು ಪೂರ್ಣಗೊಳಿಸಿರುತ್ತಾರೆ. ಅಭಿನಯವಲ್ಲದೇ ಇವರು ರೂಪದರ್ಶಿ ಯಾಗಿಯೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.ಜೆ.ಸಿ.ಐ ಸಪ್ತಾಹ ಬೆಳ್ತಂಗಡಿ ಆಯೋಜಿಸಿದ ಸ್ಪರ್ಧೆಯಲ್ಲಿ ಮಿಸ್ ತುಳುನಾಡ್ ರನ್ನರ್ ಆಪ್ ಪ್ರಶಸ್ತಿ . MRS ಇಂಡಿಯಾ ಕರ್ನಾಟಕ ಟ್ರೈನರ್ ಮಂಗಳೂರು 2022-23 ಆಗಿ ಸೆಲೆಕ್ಟ್ ಆಗಿರುತ್ತಾರೆ.ರೂಪದರ್ಶಿಯಾದ ಇವರು ಕೆಲವೊಂದು ಸಂಸ್ಥೆಯ ಜಾಹಿರಾತುಗಳಲ್ಲಿ ನಟನೆ ಮತ್ತು ಛಾಯಾಗ್ರಹಣ ಕ್ಕೆ ಮೆರುಗಳನ್ನು ನೀಡಿದ್ದಾರೆ.ಇವರು ಪಿಲಿ ಎಂಬ ತುಳು ಮೂವಿ ಪರದೆಯಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರು ಉತ್ತಮ ನಿರೂಪಕಿಯೂ ಹೌದು ಮಾತೇ ಮುತ್ತು ಮಾತೇ ಮಾಣಿಕ್ಯ ಎಂಬ ತತ್ವದಡಿಯಲ್ಲಿ ತನ್ನ ಮಾತಿನ ಸೊಬಗನ್ನು ಹತ್ತೂರ ಪಸರಿಸುತ್ತಾ ಬರುತ್ತಿದ್ದು ಪ್ರಸ್ತುತ ಕೆಲವು ಚಾನೆಲ್ ಗಳಲ್ಲಿ ನಿರೂಪಕಿಯಾಗಿದ್ದರುಸಾಧನೆಯಿಂದ ಇವರು ತನ್ನ ಮನೆಯವರಿಗೆ ಮತ್ತು ಊರಿಗೆ ಹೆಸರು ಮತ್ತು ಕೀರ್ತಿಯನ್ನು ತರುತ್ತಿದ್ದರು.ಇವರ ಸಾಧನೆಯನ್ನು ಮನಗಂಡು ಊರ ಪರವೂರ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದ್ದು.ಪ್ರಮುಖವಾಗಿ 2022 ರಲ್ಲಿ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಹಾಗೂ ಶಕ್ತಿ ಸಂಸ್ಥೆ (ರಿ) ಬೆಂಗಳೂರು ಇವರು ಆಯೋಜಿಸಿದ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.ಪೂಜಾ ಅವರಿಗೆ ಸಿನಿಮಾ ಕ್ಷೇತ್ರದ ಬಹುದೊಡ್ಡ ನಟಿಯಾಗಬೇಕೆಂಬ ಹಂಬಲವಿದೆ.ಇವರ ಎಲ್ಲ ಕನಸ್ಸುಗಳು ಇವರ ಪ್ರಯತ್ನಕ್ಕೆ ಪ್ರತಿಫಲ ಸಿಗಲಿ ಅನ್ನುವ ಆಶಯ ನಮ್ಮೆಲ್ಲರದು..

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading