
ಸುಳ್ಯದ ರಥಬೀದಿಯ ಬಳಿಯಲ್ಲಿ ಇಂದು ಸಂಜೆ ಆಲ್ಟೊ ಕಾರೊಂದು ರಸ್ತೆ ಬದಿಯ ಗುಂಡಿ ತಪ್ಪಿಸಲು ಹೋಗಿ ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ. ಪಾದಚಾರಿಯನ್ನು ಕಾರಿನ ಚಾಲಕ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ರಸ್ತೆ ಬದಿ ಉಂಟಾಗಿರುವ ಗುಂಡಿಯನ್ನು ನಗರ ಪಂಚಾಯತ್ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿರುವುದೇ ಈ ಅಪಘಾತ ಸಂಭವಿಸಲು ಕಾರಣವೆಂದು ಜನರಾಡಿಕೊಳ್ಳುತ್ತಿದ್ದಾರೆ.
