ಮಳೆಯಿಂದ ಹಾನಿಗೊಂಡ ಕೊಲ್ಲಮೊಗ್ರ ಹಾಗೂ ಹರಿಹರ ಪ್ರದೇಶಗಳಿಗೆ ಪುತ್ತೂರು ಸಹಾಯಕ ಆಯುಕ್ತರು ಗಿರೀಶ್ ನಂದನ್ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು. ಪ್ರವಾಹ ಪರಿಸ್ಥಿತಿಯ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಸಾಮಾಜಿಕ ಕಾರ್ಯಕರ್ತ ಉದಯ ಶಿವಾಲ ಸಮಸ್ಯೆಗಳ ಬಗ್ಗೆ ವಿವರ ನೀಡಿದರು.
ಈ ಭಾಗದ ಜನರಿಗೆ ಕಳೆದ ಮೂರು ದಿನಗಳಿಂದ ನೆಟ್ವರ್ಕ್ ಇಲ್ಲದೆ ಪರದಾಡುತ್ತಿರುವ ವಿಷಯ ತಿಳಿಸಿದರು. ತಕ್ಷಣ ಬಿಎಸ್ ಎನ್ ಎಲ್ ಟವರ್ ನ ಬಳಿ ತೆರಳಿ ಬಿಎಸ್ ಎನ್ ಎಲ್ ಅಧಿಕಾರಿಗಳನ್ನು ಸಂಪರ್ಕಿಸಿ ಕೊಲ್ಲಮೊಗ್ರ ಹಾಗೂ ಹರಿಹರದ ಟವರ್ ಗೆ ಹೊಸ ಬ್ಯಾಟರಿ ಅಳವಡಿಸುವಂತೆ ಸೂಚಿಸಿದರಲ್ಲದೆ ಆ ಬ್ಯಾಟರಿಗೆ ಹಣದ ವ್ಯವಸ್ಥೆಯನ್ನು ನೀಡುವಂತೆ ತಹಶೀಲ್ದಾರ್ ಮಂಜುನಾಥ್ ಬಳಿ ಸೂಚಿಸಿದರು. ಹಾಗೂ ಸ್ಥಳಕ್ಕೆ ಬರುವಂತೆ ಬಿಎಸ್ ಎನ್ ಎಲ್ ಅಧಿಕಾರಿಗಳಿಗೆ ಹೇಳಿದರೂ ಅವರು ಸ್ಥಳಕ್ಕೆ ಬರಲೇ ಇಲ್ಲ. ಹೊಸ ಬ್ಯಾಟರಿ ಖರೀದಿಸಲು ಹಣ ನೀಡುತ್ತೇವೆ ಎಂದರು. ಇದುವರೆಗೆ ಅದರ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ.
ಸಾಮಾಜಿಕ ಕಾರ್ಯಕರ್ತ ಉದಯ ಶಿವಾಲ ಬಿಎಸ್ ಎನ್ ಎಲ್ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ.
ಬಿಎಸ್ ಎನ್ ಎಲ್ ಅಧಿಕಾರಿಗಳ ಅಹಂಕಾರದ ಪರಮಾವಧಿ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಕೇಳಿಬರುತ್ತಿದೆ.
ಸುಳ್ಯ ತಹಶೀಲ್ದಾರ್ ಮಂಜುನಾಥ್ , ಪಂಜ ಆರ್.ಐ ನಾಗರಾಜ್ , ಗ್ರಾಮಕರಣಿಕ ಯತೀನ್.ಎ, ಜಯಂತ ಬಾಳುಗೋಡು, ಪ್ರಿಯ ಹರಿಹರ ಉಪಸ್ಥಿತಿರಿದ್ದರು.