
ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ತೆರಳುವ ಕುರುಂಜಿಭಾಗ್ ರಸ್ತೆಯಲ್ಲಿ ನೀರು ತುಂಬಿ ಸಂಕಷ್ಟ ಪಡಬೇಕಾಯಿತು. ನಗರ ಪಂಚಾಯತ್ ವ್ಯಾಪ್ತಿಯ ಕುರುಂಜಿ ಭಾಗ್ ರಸ್ತೆಯಲ್ಲಿರುವ ಒಳಚರಂಡಿ ವ್ಯವಸ್ಥೆ ಅವ್ಯವಸ್ಥೆಯಿಂದಾಗಿ ಹೊಳೆಯಾಗಿ ಮಾರ್ಪಾಡಾಗಿ ವಾಹನಸವಾರರು ಪರದಾಡುವ ಪ್ರಸಂಗ ಉಂಟಾಯಿತು. ಇನ್ನಾದರೂ ನಗರ ಪಂಚಾಯತ್ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಳ್ಳುವುದೇ ಎಂದು ಕಾದು ನೋಡಬೇಕಿದೆ.
