

ಅಜ್ಜಾವರ ಗ್ರಾಮದ ದೊಡ್ಡೇರಿ ಬಸವನಪಾದೆ ನಿವಾಸಿ ಬಾಬು ಎಂಬುವವರ ಮನೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಸಿತಗೊಂಡಿದೆ. ಮನೆಯ ಒಂದು ಭಾಗ ಧರಾಶಾಹಿಯಾಗಿದೆ. ಕಳೆದ ಭಾರಿ ಕೂಡ ಇವರ ಮನೆಗೆ ಹಾನಿಯಾಗಿತ್ತು. ಗ್ರಾಮ ಪಂಚಾಯತ್ ನಿಂದ ಹತ್ತು ಸಾವಿರ ಸಹಾಯಧನ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಇದೀಗ ಸದ್ಯ ಮನೆಗೆ ಟಾರ್ಪಲ್ ಹೊದಿಕೆ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
