Ad Widget

ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಮಮತಾ ಕೆ ರವರಿಗೆ ಡಾಕ್ಟರೇಟ್ ಪದವಿ

ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಮಮತಾ ಪುರುಷೋತ್ತಮ ಇವರ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಇವರು ಡಾ. ಶಂಕರ ನಾರಣಪ್ಪ, ಅಸೋಸಿಯೇಟ್ ಪ್ರೊಫೆಸರ್, ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮೈಸೂರು ಇವರ ಮಾರ್ಗದರ್ಶನದಲ್ಲಿ “Role of Women members in Mangalore corporation -A Study (2010-15)” ಎಂಬ ವಿಷಯದ ಕುರಿತು ಮಹಾ ಪ್ರಬಂಧವನ್ನು ಮಂಡಿಸಿದ್ದರು.ಇವರ ಇನ್ನೂ ಹಲವು ಪ್ರಬಂಧಗಳು ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಸುಮಾರು ಇಪ್ಪತ್ತು ವರ್ಷಗಳಿಂದ ನೆಹರೂ ಮೆಮೋರಿಯಲ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಾರೆಪ್ಪಾಡಿಯ ದಿವಂಗತ ಚಿನ್ನಪ್ಪ ಮಾಸ್ತರ್ ಮತ್ತು ಯಮುನಾ ದಂಪತಿಗಳ ಸೊಸೆಯಾಗಿರುವ ಇವರು ಕೆವಿಜಿ ದಂತ ಮಹಾವಿದ್ಯಾಲಯದಲ್ಲಿ ಉದ್ಯೋಗಿಯಾಗಿರುವ ಪುರುಷೋತ್ತಮ ಪಾರೆಪ್ಪಾಡಿಯವರ ಧರ್ಮಪತ್ನಿ. ವಿಟ್ಲ ಕಾಯರ್ ಮಾರ್ ಧನಂಜಯ ಮತ್ತು ಶಾರದಾ ದಂಪತಿಗಳ ಪುತ್ರಿ.ಇವರನ್ನು ಅಕಾಡೆಮಿ ಅಫ್ ಲಿಬರಲ್ ಅಫ್ ಲಿಬರಲ ಎಜ್ಯುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಹಾಗೂ ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು, ಶೈಕ್ಷಣಿಕ ಸಲಹೆಗಾರರು ಮತ್ತು ಭೋದಕ ಭೋದಕೇತರ ವೃಂದದವರು ಅಭಿನಂದಿಸಿದರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!