ಕಾಲಚಕ್ರದ ಆಟವ ಅರಿತವರಾರು, ಬದುಕ ಪಯಣದಿ ಏಳು-ಬೀಳುಗಳ ಕಾಣದವರಾರು…? ಏಳು-ಬೀಳುಗಳ ಈ ಹಾದಿಯಲ್ಲಿ ಬಂದಂತಹ ಕಷ್ಟಗಳೆಷ್ಟೋ, ನೋವುಗಳೆಷ್ಟೋ ಲೆಕ್ಕವಿರಿಸಿದವರಾರು…? ಲೆಕ್ಕವಿಲ್ಲದಷ್ಟು ಕಷ್ಟಗಳ ಕಟ್ಟಿಟ್ಟು, ನೋವುಗಳ ಬಚ್ಚಿಟ್ಟು ಮುನ್ನಡೆದು ಬದುಕಿನಲ್ಲಿ ಮೇಲೇರಿದಾಗ ನಮ್ಮವರು ಎಂದು ಬಂದವರೆಷ್ಟೋ, ಕೆಳಗುರುಳಿದಾಗ ತುಳಿದು ನಡೆದವರೆಷ್ಟೋ…? ಮೇಲೇರಿದಾಗ ಜೊತೆ ನಡೆದು ಬಂದವರು, ಕೆಳಗುರುಳಿದಾಗ ತುಳಿದು ಸಾಗಿದವರ ಮಧ್ಯೆ ಕಾಲ ಕಸವಾಯಿತು ಈ ಬದುಕು… ಆದರೆ ಸರಿಯಾದ ಸಮಯಕ್ಕೆ ಕಾದು ತನ್ನ ಅಸ್ತಿತ್ವವ ಜಗಕೆ ಸಾರಿ ಹೇಳಿತು ಈ ಬದುಕು… ಅಂದು ತುಳಿದು ಸಾಗಿದವರು ಇಂದು ತಲೆತಗ್ಗಿಸಿ ನಿಂತಿರುವರು… ಬದಲಾಯಿತು ಬದುಕು, ಬದಲಾಯಿತು ಸಮಯ…ಸತ್ಯವಾಯಿತು ಹಿರಿಯರ ಮಾತು “ಕಾಲಚಕ್ರ ತಿರುಗುತ್ತಲೇ ಇರುತ್ತದೆ, ಎಲ್ಲರಿಗೂ ಸಮಯ ಬಂದೇ ಬರುತ್ತದೆ…”
✍️ಉಲ್ಲಾಸ್ ಕಜ್ಜೋಡಿ