ಸುಳ್ಯ ಅಂಚೆ ಕಚೇರಿಯ ನೇತೃತ್ವದಲ್ಲಿ ಪಿಂಚಣಿದಾರರ ಎಸ್‌ಬಿ ಖಾತೆಗಳಿಗೆ ಆಧಾರ್ ಸೀಡಿಂಗ್ ಕ್ಯಾಂಪ್ ಜು. 19 ರಂದು ಸುಳ್ಯದ ಅಂಚೆ ಕಚೇರಿಯಲ್ಲಿ ನಡೆಯಲಿದೆ. ಸರಕಾರದಿಂದ ಪಡೆಯುವ ವೃದ್ದಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ, ಮೃತ್ರಿ, ಮನಸ್ವಿನಿ ಇತರ ಮಾಸಿಕ ಪಿಂಚಣಿ, ಕಿಸಾನ್ ಸಮ್ಮಾನ್ ಹಾಗೂ ಸರಕಾರದ ಯೋಜನೆಗಳ ನೇರ ನಗದು ವರ್ಗಾವಣೆಗಾಗಿ ಆಧಾರ್ ಸೀಡಿಂಗ್ ಕಡ್ಡಾಯವಾಗಿದೆ. ಫಸಲ್ ಭೀಮಾ ಯೋಜನೆ(ಬೆಳೆ ವಿಮೆ) ಹಾಗೂ ಅನ್ನಭಾಗ್ಯ ಫಲಾನುಭವಿಗಳಿಗೂ ಅವಕಾಶವಿದೆ. ಪಿಂಚಣಿದಾರರು ಆಧಾರ್ ಕಾರ್ಡ್ ಮತ್ತು ಅಂಚೆ ಎಸ್.ಬಿ. ಪಾಸ್‌ಪುಸ್ತಕ ತರಬೇಕು. ಎಸ್.ಬಿ. ಪಾಸ್‌ಬುಕ್‌ಗೆ ಆಧಾರ್ ಜೋಡಣೆಯಾಗಿರಬೇಕು. ಹೆಚ್ಚಿನ ಮಾಹಿತಿಗೆ ಸುಳ್ಯ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.
- Thursday
- November 21st, 2024