ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಇದರ ‘ಎ ತರಗತಿ’ ಸದಸ್ಯರ ಮಕ್ಕಳ ಪೈಕಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ 2022-23ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತಲಾ 10 ವಿದ್ಯಾರ್ಥಿಗಳಿಗೆ ಸಂಘದ ವಾರ್ಷಿಕ ಮಹಾಸಭೆಯಂದು ಗುರುತಿಸಿ ವಿದ್ಯಾರ್ಥಿ ವೇತನ ನೀಡಲು ತೀರ್ಮಾನಿಸಲಾಗಿದೆ.ಅರ್ಹ ವಿದ್ಯಾರ್ಥಿಗಳು ಲಿಖಿತ ಅರ್ಜಿಯನ್ನು ಸಂಘದಿಂದ ಪಡೆದು ದಾಖಲೆಗಳೊಂದಿಗೆ ಸುಳ್ಯದ ಕಛೇರಿಯಲ್ಲಿ 31.08.2023ರೊಳಗಾಗಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಸಂಘದ ಕಛೇರಿಯನ್ನು ಸಂಪರ್ಕಿಸಲು Led. ((08257) 298723/230323/230723) ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸೂರ್ತಿಲ ತಿಳಿಸಿದ್ದಾರೆ.
- Thursday
- November 21st, 2024