ಬಾವಿ ನೀರಲ್ಲಿ ಪೆಟ್ರೋಲ್ ವಾಸನೆ, ಅಧಿಕಾರಿಗಳಿಂದ ಪರಿಶೀಲನೆಬೆಳ್ಳಾರೆ ಸಮೀಪದ ಪಂಜಿಗಾರಿನಲ್ಲಿರುವ ಬಾವಿ ನೀರು ಪೆಟ್ರೋಲ್ ನಂತೆ ವಾಸನೆ ಬರುತ್ತಿರುವ ಘಟನೆ ವರದಿಯಾಗಿದೆ.ಕಳಂಜದ ಪಂಜಿಗಾರಿನ ದಯಾನಂದ ಗೌಡ ಅವರ ಮನೆಯಲ್ಲಿ ಜು.8ರಂದು ಬಾವಿನೀರಿನಲ್ಲಿ ತೈಲ ಬೆರಕೆಯಾದಂತೆ ಕಂಡುಬರುತ್ತಿತ್ತು. ಈ ಕುರಿತು ಗ್ರಾಮ ಪಂಚಾಯತ್ಗೆ ದೂರು ನೀಡಿದ ಬಳಿಕ ಪರೀಕ್ಷೆ ನಡೆಸಲಾಗಿದ್ದು ಕ್ಲೋರೈಡ್ ಅಂಶ ಕಡಿಮೆ ಇದ್ದು ಕುಡಿಯಲು ಯೋಗ್ಯವಲ್ಲ ಎಂದು ತಿಳಿಸಿದ್ದಾರೆ.
- Thursday
- November 21st, 2024