- Wednesday
- April 2nd, 2025

ಸುಳ್ಯ ಬೈಕ್ ಗೆ ಟಿಪ್ಪರ್ ಲಾರಿ ಢಿಕ್ಕಿಯಾಗಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾದ ಘಟನೆ ಆಲೆಟ್ಟಿ ಗ್ರಾಮದ ಮಿತ್ತಡ್ಕ ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು ಟಿಪ್ಪರ್ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಮುಂದಕ್ಕೆ ತೆರಳಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಆಲೆಟ್ಟಿಯ ಮಿತ್ತಡ್ಕ ಕೆ.ಎಫ್.ಡಿ.ಸಿ ವಿಶ್ರಾಂತಿ ಗೃಹದ...

ಸುಳ್ಯದ ಪ್ರತಿಷ್ಠಿತ ಸೋಲಾರ್ ಸಂಸ್ಥೆಯದಾ ಸೆಲ್ಕೋ ಸೋಲಾರ್ ಹಾಗೂ ಮೇಂಡಾ ಫೌಂಡೇಶನ್ ವತಿಯಿಂದ ನಿರ್ಮಿಸಿದ ಸ್ಮಾರ್ಟ್ ಕ್ಲಾಸ್ ಚಂದ್ರಯಾನ-3 ಕಾರ್ಯಕ್ರಮವನ್ನು ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಶಾಲೆಯ ವಿಧ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಮೋಹಿನಿ ಇವರ ನೇತೃದಲ್ಲಿ ಚಂದ್ರಯಾನ-3 ಉಡಾವಣೆ ನೇರ ಪ್ರಸಾರದ ಕಾರ್ಯಕ್ರಮವನ್ನು ವಿಧ್ಯಾರ್ಥಿಗಳಿಗೆ ತೋರಿಸಲಾಯಿತು. ಸೆಲ್ಕೋ ಸೋಲಾರ್ ಸಂಸ್ಥೆ ಹಾಗೂ ಮೆಂಡಾ ಫೌಂಡೇಶನ್ ಹಾಗೂ...

ಕಡಬ: ಸುಳ್ಯ ಮಿಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಪರಾಮರ್ಶೆ ಸಭೆಯಲ್ಲಿ ಜಿ .ಕೃಷ್ಣಪ್ಪ ಮತ್ತು ನಂದಕುಮಾರ್ ಬಣದ ನಡುವೆ ಬಡಿದಾಡಿಕೊಂಡ ಘಟನೆ ಜು.14ರಂದು ನಡೆದಿದೆ. ಕಾಂಗ್ರೇಸ್ ಸಭೆಯು ಕಡಬ ಅಂಬೇಡ್ಕರ್ ಭವನದಲ್ಲಿ ನಡೆದಿದ್ದು, ಸೋಲಿನ ಪರಾಮರ್ಶೆ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್. ಸಮಿತಿಯ ಮುಖಂಡರು ಆಗಮಿಸಿದ್ದರು. ಈ ಸಭೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ...

SSC Recruitment 2023: ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ಭರ್ಜರಿ ಉದ್ಯೋಗದ(SSC Recruitment 2023) ಆಫರ್ ನೀಡಿದೆ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಮಲ್ಟಿ ಟಾಸ್ಕಿಂಗ್ (ತಾಂತ್ರಿಕ) ಸಿಬ್ಬಂದಿ, ಮತ್ತು ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-...

ಗುತ್ತಿಗಾರು ಆಟೋ ರಿಕ್ಷಾ ನಿಲ್ದಾಣದ ಬಿ.ಯಂ.ಎಸ್. ಘಟಕದ ಚಾಲಕ ಸದಸ್ಯರಿಂದ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. ಈ ಸ್ವಚ್ಛತಾ ಶ್ರಮ ಸೇವೆಯಲ್ಲಿ ಬಿ.ಯಂ.ಎಸ್. ಸದಸ್ಯರಾದ ವಿಶ್ವನಾಥ ಚತ್ರಪ್ಪಾಡಿ, ಧರ್ಮಪಾಲ ಪಂಜಿಪಳ್ಳ, ಸತ್ಯನಾರಾಯಣ ಬಾಕಿಲ, ಉದಯ ಕುಮಾರ ಹಾಲೆಮಜಲು, ಪ್ರದೀಪ್ ಪುಲ್ಲಡ್ಕ, ಯತೀಶ ಪಾರೆಪ್ಪಾಡಿ, ತೀರ್ಥೇಶ್ ಪೈಕ, ಶಶಿಧರ ಕುಕ್ಕುಜೆ, ರವೀಂದ್ರ ಕೋಡಂಬು, ಜಯಪ್ರಕಾಶ್ ಕಡ್ಲಾರು, ಉಮೇಶ್ ಗೌರಿಗುಂಡಿ,...

ಚೆಂಬು ಗ್ರಾಮದ ಕುದ್ರೆಪಾಯದಲ್ಲಿ ತಮ್ಮನಿಂದ ಅಣ್ಣ ಕೊಲೆಯಾದ ಘಟನೆ ಇಂದು ವರದಿಯಾಗಿದೆ. ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿದ್ದು, ಸಹೋದರರು ಸೇರಿ ಉಸ್ಮಾನ್ ಎಂಬವರನ್ನು ಇಂದು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ. ಉಸ್ಮಾನ್ ಕುದ್ರೆಪಾಯದಲ್ಲಿ ಭೂಮಿ ಹೊಂದಿದ್ದರು. ಅರಂತೋಡಿನಲ್ಲೂ...

ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2023-24ನೇ ಸಾಲಿನ 6 ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಫಾಯಿ ಕರ್ಮಚಾರಿ, ಸ್ಮಶಾನ ಕಾರ್ಮಿಕ, ದೇವದಾಸಿ, ಮ್ಯಾನುವಲ್ ಸ್ಕ್ಯಾವೆಂಜ ಸಮುದಾಯದ ಮಕ್ಕಳಿಗೆ ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ನೀಡಿ ನೇರವಾಗಿ ದಾಖಲಾತಿಯನ್ನು ನೀಡಲಾಗುವುದು. ವಸತಿ ಶಾಲೆಗಳಲ್ಲಿ ಉಚಿತ ಊಟ ವಸತಿಯೊಂದಿಗೆ ಸಮವಸ್ತ್ರ, ಪಠ್ಯಪುಸ್ತಕ, ಲೇಖನ ಸಾಮಾಗ್ರಿಗಳು ಮೂಲಸೌಲಭ್ಯವನ್ನು ಒದಗಿಸಲಾಗುವುದು....

ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಎಲಿಮಲೆ ಇವರನ್ನು ಆಯ್ಕೆ ಮಾಡಲಾಯಿತು. ಪುತ್ತೂರಿನಲ್ಲಿ ನಡೆದ ಜಿಲ್ಲಾ ಬೈಠಕ್ ನಲ್ಲಿ ಈ ಆಯ್ಕೆ ಮಾಡಲಾಯಿತು.ಇವರು ಸುಳ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ವಿ.ಹೆಚ್.ಪಿ ಬಜರಂಗದಳ ಸಂಘಟನೆಯಲ್ಲಿ ಸಕ್ರಿಯ ವಾಗಿದ್ದಾರೆ.