ಆಲೆಟ್ಟಿ ಗ್ರಾಮ ಪಂಚಾಯತಿನ 2 ನೇ ವಾರ್ಡಿನ ಪೈಂಬೆಚ್ಚಾಲು ಎಂಬಲ್ಲಿ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿ ಕೂಳಿಯಡ್ಕ ನಾರಾಯಣ ಎಂಬವರ ಮನೆ ಪಕ್ಕದಲ್ಲಿ ಹರಿಯುತ್ತಿರುವ ತೋಡಿನ ಬದಿ ಕುಸಿತವಾಗಿದೆ. ಮಳೆ ಜೋರಾಗಿ ಸುರಿಯುವ ಸಂದರ್ಭದಲ್ಲಿ ವಿಪರೀತ ನೀರಿನ ಹರಿವು ಹೆಚ್ಚುವುದರಿಂದ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದ್ದು, ರಸ್ತೆಯ ಉಳಿವಿಗಾಗಿ ಕೂಡಲೇ ತಡೆಗೋಡೆ ನಿರ್ಮಿಸಬೇಕೆಂದು ಬೇಡಿಕೆ ಇರಿಸಿ ಜಿಲ್ಲಾಧಿಕಾರಿಯವರಿಗೆ ಗ್ರಾ.ಪಂ.ಸದಸ್ಯೆ ಗೀತಾ ಕೋಲ್ಚಾರು, ಧರ್ಮಪಾಲ ಕೊಯಿಂಗಾಜೆ ಮನವಿ ನೀಡಿದರು. ಸ್ಥಳೀಯ ನಿವಾಸಿ ನಿಸಾರ್ ತೋಟಕೊಚ್ಚಿ ಮತ್ತಿತರರು ಜತೆಯಲ್ಲಿದ್ದರು.
- Thursday
- November 21st, 2024