Ad Widget

ಕೊಲ್ಲಮೊಗ್ರು : ಮುಳ್ಳುಬಾಗಿಲು ಎಂಬಲ್ಲಿ ತೋಟಗಳಿಗೆ ಆನೆ ದಾಳಿ

ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು, ಕೊಪ್ಪಡ್ಕದಲ್ಲಿ ತೋಟಗಳಿಗೆ ಆನೆ ದಾಳಿ ಮಾಡಿದ ಘಟನೆ ಜು.12 ರಂದು ರಾತ್ರಿ ನಡೆದಿದೆ.ಮುಳ್ಳುಬಾಗಿಲು ಸುರೇಂದ್ರ ಎಂಬುವವರ ತೋಟದಲ್ಲಿ ಬಾಳೆ ಗಿಡಗಳನ್ನು ಹಾಳುಗೆಡವಿದ್ದು ನಂತರ ಮಾಧವ ಕೊಪ್ಪಡ್ಕ ಎಂಬುವವರ ತೋಟಕ್ಕೆ ಬಂದ ಆನೆ ಅಲ್ಲಿ ಹಲಸಿನ ಹಣ್ಣುಗಳನ್ನು ತಿಂದು 4-5 ಅಡಿಕೆ ಗಿಡಗಳನ್ನು ಹಾಳುಮಾಡಿ ಗಿರಿಯಪ್ಪ ಕೊಪ್ಪಡ್ಕ, ಜಯಪ್ರಕಾಶ್ ಕಜ್ಜೋಡಿ, ನಾರಾಯಣ ಮುಳ್ಳುಬಾಗಿಲು, ವೆಂಕಟ್ರಮಣ ಮಾವಾಜಿ ಅವರ ತೋಟಗಳ ಮೂಲಕ ಆನಂದ ಎಂಬುವವರ ಮನೆಯ ಪಕ್ಕದಲ್ಲಿ ಕಾಡಿಗೆ ತೆರಳಿದೆ ಎಂದು ತಿಳಿದುಬಂದಿದೆ.

. . . . . . . . .

ಆದ್ದರಿಂದ ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವವರು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.3 ದಿನಗಳ ಹಿಂದೆ ಹರಿಹರ ಪಲ್ಲತ್ತಡ್ಕ ಬಿ.ಎಸ್.ಎನ್.ಎಲ್ ಎಕ್ಸ್ ಚೇಂಜ್ ಬಳಿಯೂ ಆನೆ ಬಂದಿದ್ದು, ತೆಂಗಿನ ಮರಗಳನ್ನು ಹಾಳುಗೆಡವಿದೆ ಎಂದು ತಿಳಿದುಬಂದಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading