

ಸುಳ್ಯದ ಶಾಂತಿನಗರದಲ್ಲಿರುವ ತಾಲೂಕು ಕ್ರೀಡಾಂಗಣ ಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್ ಮೆದು ಕ್ರೀಡಾಂಗಣದ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರೊಬೇಷನರಿ ಡಿ.ಸಿ. ಎ.ಸಿ. ಮಹೇಶ್ ಚಂದ್ರ, ತಹಶೀಲ್ದಾರ್ ಮಂಜುನಾಥ್, ಆರ್.ಐ. ಕೊರಗಪ್ಪ ಹೆಗ್ಡೆ, ತಾಲೂಕು ಸರ್ವೆಯರ್ ಜಗದೀಶ್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ, ನ.ಪಂ. ಮಾಜಿ ಅಧ್ಯಕ್ಷ ವಿನಯ ಕಂದಡ್ಕ, ಸದಸ್ಯ ಎಂ.ವೆಂಕಪ್ಪ ಗೌಡ, ಶರೀಫ್ ಕಂಠಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕಾಂಗ್ರೆಸ್ ನಾಯಕರಾದ ಸದಾನಂದ ಮಾವಜಿ, ಟಿ.ಎಂ.ಶಹೀದ್ ತೆಕ್ಕಿಲ್, ಸ್ಥಳೀಯರಾದ ಡಾ.ಸುಂದರ ಕೇನಾಜೆ, ಗೌರಿಶಂಕರ್, ನವನೀತ್ ಬೆಟ್ಟಂಪಾಡಿ ಮತ್ತಿತರರು ಉಪಸ್ಥಿತರಿದ್ದರು.