

ವಳಲಂಬೆ ಪೈಕ ಮೋಹನಹಳ್ಳಿಯ ರಸ್ತೆ ಅಭಿವೃದ್ಧಿಯಾಗದೇ ತೀರ ಹದಗೆಟ್ಟಿದ್ದು ನಡೆದುಕೊಂಡು ಹೋಗಲು ಕಷ್ಟವಾಗುತ್ತಿತ್ತು. ಭಾರಿ ಮಳೆಯಿಂದಾಗಿ ರಸ್ತೆಯೆಲ್ಲಾ ಕೆಸರುಮಯವಾಗಿ ಶಾಲಾ ಮಕ್ಕಳಿಗೆ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸುವಂತಾಗಿತ್ತು. ಇದನ್ನು ಮನಗಂಡು ಗ್ರಾಮಸ್ಥರು ಚರಂಡಿ ವ್ಯವಸ್ಥೆ ಮತ್ತು ರಸ್ತೆಗೆ ಚರಳು ಹಾಕಿ ದುರಸ್ತಿ ಪಡಿಸಿದರು. ಈ ಸಂದರ್ಭದಲ್ಲಿ ನೂತನ್ ಕಡ್ಯ, ರಮೇಶ್ ಮೋಹನ ಹಳ್ಳಿ. ಕಾರ್ತಿಕ ಮೋಹನಹಳ್ಳಿ, ನಿತೀಶ್ ಮೋಹನ ಹಳ್ಳಿ, ರಂಜಿತ್ ಮೋಹನಹಳ್ಳಿ. ಮತ್ತು ಸುಧೀರ್ ನಡುಮನೆ ಸಹಕಾರ ನೀಡಿದರು.