Ad Widget

ಜಾಹೀರಾತು ಮೂಲಗಳು ಕೂಡಾ ಭ್ರಷ್ಟಾಚಾರ ರಹಿತವಾಗಿದ್ದರೆ ಮಾತ್ರವೇ ನಿಜವಾದ ಉದ್ದೇಶ ಸಾಕಾರ : ಶೈಲೇಶ್ ಅಂಬೆಕಲ್ಲು

. . . . . . .

ಪತ್ರಿಕಾ ಜಾಹೀರಾತು ಬಗ್ಗೆ ತನ್ನ ಹೇಳಿಕೆಯನ್ನು ತಿರುಚಿದ್ದಾರೆ. ಪತ್ರಿಕಾ ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್‌ ಹಾಕುತ್ತೇವೆ ಎಂದು ಇವರು ಹಲವು ಕಡೆ ಹೇಳಿದ್ದಾರೆ. ಇದು ಕೂಡಾ ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ ಎಂಬುದು ನನ್ನ ನಿಲುವಾಗಿದೆ. ಇವರದು ನಿಜವಾದ ಭ್ರಷ್ಟಾಚಾರ ವಿರೋಧಿ ಅಭಿಯಾನವಲ್ಲ. ಜಾಹೀರಾತು ಸಿಗದೆ ಪತ್ರಿಕೆಗಳು ನಡೆಯಲು ಸಾಧ್ಯವಿಲ್ಲ ಎಂಬ ಕನಿಷ್ಟ ಜ್ಞಾನವೂ ನನಗೆ ಇದೆ. ಉಳಿದ ಯಾವ ಪತ್ರಿಕೆಗಳೂ ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್‌ ಹಾಕುತ್ತೇವೆ ಎಂದು ಹೇಳುವುದಿಲ್ಲ. ಜಾಹೀರಾತು ಮೂಲಗಳು ಕೂಡಾ ಭ್ರಷ್ಟಾಚಾರ ರಹಿತವಾಗಿದ್ದರೆ ಮಾತ್ರವೇ ನಿಜವಾದ ಉದ್ದೇಶ ಸಾಕಾರವಾಗಬಹುದು. ಆದರೆ ನನ್ನ ಹೇಳಿಕೆಯನ್ನು ತಿರುಚಿ ಉದ್ದೇಶಪೂರ್ವಕವಾಗಿ ಹಿಂದಿನ ಪತ್ರಿಕೆ ಹಾಗೂ ಹಿಂದಿನ ಘಟನೆಗಳನ್ನು ಉಲ್ಲೇಖಿಸಿರುವುದೇ ಅವರ ಮಾನಸಿಕತೆಯನ್ನು ತೋರಿಸುತ್ತದೆ. ಜಾಹೀರಾತು ನೀಡದೇ ನ್ಯೂಸ್‌ ಹಾಕುವುದಿಲ್ಲ ಎನ್ನುವ ಧೋರಣೆ ಬದಲಾಗಬೇಕು. ನಾನು ಅಲ್ಲಿ ಮಾತನಾಡಿರುವ ವಿಡಿಯೋ ಚಿತ್ರೀಕರಣವಾಗಿದೆ. ಅದನ್ನು ಎಡಿಟ್‌ ಮಾಡದೆ ಯಥಾವತ್ತಾಗಿ ತೋರಿಸಲಿ ಎಂದು ಸವಾಲು ಹಾಕುತ್ತಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!