ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರ್ ಪಂಗಡ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಜು.8 ರಂದು ಜರುಗಿತು. ಶಾಲಾ ಸಂಚಾಲಕರಾದ ಫಾ| ಪಾವ್ಲ್ ಕ್ರಾಸ್ತಾರವರು ದೀಪ ಪ್ರಜ್ವಲಿಸುವುದರ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಂತರ ತಂಡದ ನಾಯಕರಿಗೆ ಗುಂಪಿನ ಧ್ವಜವನ್ನು ಹಸ್ತಾಂತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯನಿ ಸಿ| ಅನಿತಾ ಫೆರ್ನಾಂಡಿಸ್ ರವರು ವಿದ್ಯಾರ್ಥಿಗಳಿಗೆ ಅಂತರ್ ಪಂಗಡ ಸ್ಪರ್ಧೆಯ ಘೋಷ ವಾಕ್ಯ ಹೇಳುವುದರೊಂದಿಗೆ ಶುಭ ಹಾರೈಸಿದರು.
ನಂತರ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ವಿದ್ಯಾರ್ಥಿನಿ ಹೆಪ್ಸಿಬಾ ಎಂ.ರಿನ್ಸನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ರಿಶೋನ್ ಲ್ಯಾನಿಶ್ ಡಿಸೋಜಾ ಅಂತರ್ ಪಂಗಡ ಸ್ಪರ್ಧೆಗಳನ್ನು ಆಯೋಜಿಸುವುದರ ಮಹತ್ವವನ್ನು ತಿಳಿಸಿಕೊಟ್ಟರು. ತೀರ್ಪುಗಾರರಾಗಿ ಫಾ. ಪಾವ್ಲ್ ಕ್ರಾಸ್ತಾ, ಸಿ. ಅನಿತಾ ಫೆರ್ನಾಂಡಿಸ್ ಹಾಗೂ ಶ್ರೀಮತಿ ಲವೀನಾ ರವರು ಸಹಕರಿಸಿದರು.ವಿದ್ಯಾರ್ಥಿ ಶೋಧನ್ ಪಿ.ಎಂ ಸ್ವಾಗತಿಸಿ, ವಿದ್ಯಾರ್ಥಿನಿ ಚಂದನ ವಂದನಾರ್ಪಣೆಗೈದರು . ಅಂತರ್-ಪಂಗಡ ಸ್ಪರ್ಧೆಗಳ ಸಂಯೋಜಕರುಗಳಾದ ಶ್ರೀಮತಿ ರೂಪ ಕೆ ಎಂ ಹಾಗೂ ಶ್ರೀಮತಿ ವಾಣಿಶ್ರೀ ಕೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಎಲ್ಲಾ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.