
ಬಾಳುಗೋಡು ಗ್ರಾಮದ ಪುಣೇರಿ ನಿವಾಸಿ ಖ್ಯಾತ ನಾದಸ್ವರ ವಾದಕ ಪೊಡಿಯ ಅವರು ಜು.08 ಶನಿವಾರದಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಡಿಯಾ ಅವರು ನಾದಸ್ವರ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು. ಇವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುಂದರಿ, ಮಕ್ಕಳಾದ ಪ್ರವೀಣ್, ಉದಯ್, ಪ್ರದೀಪ್ ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
