- Thursday
- November 21st, 2024
ಸಹಕಾರಿ ಸಂಘಗಳು ಆರ್ಥಿಕವಾಗಿ ಪ್ರಬಲವಾಗಲು ಬೆಳ್ತಂಗಡಿ ತಾಲೂಕು ಸಮರ್ಥವಾಗಿದೆ. ಇದೇ ಕಾರಣದಿಂದ ವೆಂಕಟರಮಣ ಸೊಸೈಟಿ ತಾಲೂಕಿನಲ್ಲಿ ಐದು ಶಾಖೆಗಳನ್ನು ಪ್ರಾರಂಭಿಸಿದೆ. ದ.ಕ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಬೆಳವಣಿಗೆ ಕಾಣುತ್ತಿದೆ. ಸಹಕಾರಿ ಕ್ಷೇತ್ರ ಜನರಿಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ವೆಂಕಟರಮಣ ಸೊಸೈಟಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಆರ್ಥಿಕವಾಗಿ ಪ್ರಬಲ ಶಕ್ತಿಯಾಗಿ ಬೆಳೆದಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ...
ಸುಳ್ಯ ಪೋಲೀಸ್ ಠಾಣೆಗೆ ಕ್ರೈಮ್ ಎಸೈ ಆಗಿ ಸರಸ್ವತಿ ಬಿ ಟಿ ಆಗಮಿಸಿದ್ದಾರೆ ಈ ಹಿಂದೆ ಸುಳ್ಯ ಠಾಣೆಯಲ್ಲಿ ರತನ್ ಕುಮಾರ್ ರವರು ಕ್ರೈಮ್ ಎಸೈ ಆಗಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ವಿಟ್ಲ ಠಾಣೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಸುಳ್ಯ ಪೋಲೀಸ್ ಠಾಣೆಗೆ ನೂತನ ಕ್ರೈಮ್ ಎಸೈ ಆಗಿ ಸರಸ್ವತಿ ಬಿ ಟಿ ಆಗಮಿಸಿದ್ದಾರೆ ಇವರು ಮೂಲತಃ ಕುಶಾಲನಗರದವರಾಗಿದ್ದು...
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಕುಂದಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಕಲಾಮಂದಿರ ಪೆರಾಜೆಯಲ್ಲಿ 9 ಜುಲೈ 2023 ರ ಆದಿತ್ಯವಾರದಂದು ಜರುಗಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಮಾ|ಯತೀಶ್ ಪ್ರಾರ್ಥನೆಗೈದರು. ಮುಖ್ಯ ಕಾರ್ಯನಿರ್ವಣಾಧಿಕಾರಿ ಲೋಕೇಶ್ ಹೆಚ್ ಕೆ ಸರ್ವರನ್ನು ಸ್ವಾಗತಿಸಿ, ಮಹಾಸಭೆಯ ನೋಟಿಸನ್ನು...
ಅಪ್ರಾಪ್ತ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿದ ಯುವಕನ ಮೇಲೆ ಪೋಕ್ಸೋ ಪ್ರಕರಣ ದಾಖಲಾದ ಘಟನೆ ಜು.07 ರಂದು ನಡೆದಿದೆ. ಕಲ್ಮಡ್ಕ ಗ್ರಾಮದ ಕಾರ್ತಿಕ್ ಎಂಬಾತ ಉಬರಡ್ಕದ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಇದೀಗ ಗರ್ಭವತಿಯಾಗಿದ್ದು, ಬಾಲಕಿಯ ತಾಯಿ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಜು.7 ರಂದು ಉಬರಡ್ಕದ ಬಾಲಕಿ...
ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಸುಳ್ಯ ಇದರ ವಾರ್ಷಿಕ ಮಹಾಸಭೆ ಶಿವಕೃಪಾ ಕಲಾ ಮಂದಿರದಲ್ಲಿ ಇಂದು ನಡೆಯಿತು. ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಟೈಲರ್ ಅಸೋಸಿಯೇಶನ್ ಅಧ್ಯಕ್ಷ ದಿವಾಕರ ಟಿ, ಪ್ರಜ್ವಲ್ ಕುಮಾರ್, ನಾರಾಯಣ ಬಿ ಎ, ಸುರೇಶ್ ಸಾಲ್ಯಾನ್, ಜಯಂತ ಉರ್ಲಾಂಡಿ, ಕೆ ಲಿಗೋದರ...
ಜು.6 ರಂದು ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನಾರಾಯಣನ್ ಎಂಬ ವ್ಯಕ್ತಿ ಪಾಲದಿಂದ ಬಿದ್ದು ನಾಪತ್ತೆಯಾಗಿದ್ದರು. ಸುಳ್ಯ ಪ್ರಕೃತಿ ವಿಕೋಪ ತಂಡದಿಂದ ನಿರಂತರ 3 ದಿನಗಳಿಂದ ಕಾರ್ಯಚರಣೆ ನಡೆಸುತ್ತಿದ್ದರು. ಇಂದು ಮಧ್ಯಾಹ್ನ ವೇಳೆಗೆ ಆಲೆಟ್ಟಿ ಗ್ರಾಮದ ನೆಡ್ಚಿಲ್ ಎಂಬಲ್ಲಿ ನಾರಾಯಣ ಅವರ ಮೃತದೇಹ ಸಿಕ್ಕಿದೆ ಎಂದು ತಿಳಿದುಬಂದಿದೆ. ಎಸ್ ಡಿ ಆರ್ ಫ್ , ಪೈಚಾರ್...
ಸರಕಾರಿ ಪ್ರೌಢ ಶಾಲೆ ಎಣ್ಮೂರು,ಸುಂದರ ಪ್ರತಿಷ್ಠಾನ ಬೆಂಗಳೂರು ಹಾಗೂ ಅಭ್ಯುದಯ ಸಂಸ್ಥೆಯ ಮೂಲಕ ಎಣ್ಮೂರು ಪ್ರೌಢ ಶಾಲೆಯಲ್ಲಿ ಗ್ರಂಥಾಲಯ ಉನ್ನತೀಕರಣ ಹಾಗೂ ನೋಟು ಪುಸ್ತಕ ವಿತರಣಾ ಕಾರ್ಯಕ್ರಮ ಜುಲೈ 08 ರಂದು ನಡೆಯಿತು. ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಮಾರಿ ಜಾನಕಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. JC ಪೂರ್ವ ವಲಯಾಧಿಕಾರ ಜೇಸಿ ಪ್ರದೀಪ್...
ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರ್ ಪಂಗಡ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ಜು.8 ರಂದು ಜರುಗಿತು. ಶಾಲಾ ಸಂಚಾಲಕರಾದ ಫಾ| ಪಾವ್ಲ್ ಕ್ರಾಸ್ತಾರವರು ದೀಪ ಪ್ರಜ್ವಲಿಸುವುದರ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ನಂತರ ತಂಡದ ನಾಯಕರಿಗೆ ಗುಂಪಿನ ಧ್ವಜವನ್ನು ಹಸ್ತಾಂತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯನಿ ಸಿ| ಅನಿತಾ ಫೆರ್ನಾಂಡಿಸ್ ರವರು ವಿದ್ಯಾರ್ಥಿಗಳಿಗೆ ಅಂತರ್ ಪಂಗಡ ಸ್ಪರ್ಧೆಯ...
ಬಾಳುಗೋಡು ಗ್ರಾಮದ ಪುಣೇರಿ ನಿವಾಸಿ ಖ್ಯಾತ ನಾದಸ್ವರ ವಾದಕ ಪೊಡಿಯ ಅವರು ಜು.08 ಶನಿವಾರದಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.ಪೊಡಿಯಾ ಅವರು ನಾದಸ್ವರ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು. ಇವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುಂದರಿ, ಮಕ್ಕಳಾದ ಪ್ರವೀಣ್, ಉದಯ್, ಪ್ರದೀಪ್ ಹಾಗೂ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.
Loading posts...
All posts loaded
No more posts