ಅಪಘಾತ ಆರೋಪಿಯನ್ನು ದೋಷಮುಕ್ತಿಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. 2015 ರ ಮಾರ್ಚ್ 23 ರಂದು ಲಾರಿ ಚಾಲಕ ರಿಯಾಜ್ ತನ್ನ ಲಾರಿಯಲ್ಲಿ ಜಲ್ಲಿ ತುಂಬಿಸಿಕೊಂಡು ಸಂಪಾಜೆ ಗ್ರಾಮದ ಪೆರುಂಗೋಡಿ ಎಂಬಲ್ಲಿಗೆ ತಲುಪುವಾಗ ಏರು ರಸ್ತೆ ಯಲ್ಲಿ ಲಾರಿ ಮುಂದಕ್ಕೆ ಚಲಾಯಿಸಲಾಗದೆ ಇದ್ದ ಸಂದರ್ಭದಲ್ಲಿ ಆರೋಪಿ ಚಲಾಯಿಸುತ್ತಿದ್ದ ಕಾಂಕ್ರೀಟ್ ಮೆಷಿನ್ ಗಾಡಿಯ ಸಹಾಯದಿಂದ ಹಗ್ಗದ ಮೂಲಕ ಲಾರಿಯನ್ನು ಎಳೆಯಲು ಲಾರಿ ಚಾಲಕ ರಿಯಾಜ್ ಮತ್ತು ಉದಯ ಶೆಟ್ಟಿ ಹಗ್ಗ ಕಟ್ಟುತ್ತಿದ್ದ ವೇಳೆ ಕಾಂಕ್ರೆಟ್ ಮೆಷಿನ್ ಚಾಲಕ ಆರೋಪಿ ಪ್ರಕಾಶ್ ಕಾಂಕ್ರೀಟ್ ಮೆಷಿನ್ ಗಾಡಿಯನ್ನು ಹಿಂದಕ್ಕೆ ಚಲಾಯಿಸಿದ ಪರಿಣಾಮ ಕಾಂಕ್ರೀಟ್ ಮೆಷಿನ್ ಗಾಡಿ ಹಾಗೂ ಲಾರಿಯ ಮದ್ಯೆ ಸಿಲುಕಿಕೊಂಡ ಉದಯ ಶೆಟ್ಟಿ ಎಂಬುವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ರಿಯಾಜ್ ಎಂಬುವರಿಗೆ ತೀವ್ರ ಗಾಯವಾಗಿತ್ತು .ಆರೋಪಿ ಕಾಂಕ್ರೀಟ್ ಮೆಷಿನ್ ನ ಚಾಲಕ ಪ್ರಕಾಶ ಯಾವುದೇ ಸೂಚನೆ ನೀಡದೆ ಕಾಂಕ್ರೀಟಿ ಮೆಶಿನ್ ಹಿಂದಕ್ಕೆ ಚಲಾಯಿಸಿದ್ದು ಚಾಲಕನ ನಿರ್ಲಕ್ಷತನವೇ ಮೃತನ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿ ಸುಳ್ಯ ಪೊಲೀಸರು ಆರೋಪಿಯ ವಿರುದ್ದ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.ನಂತರ ಪ್ರಕರಣವನ್ನು ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ತನಿಖೆ ನಡೆಸಿ ತನಿಖೆಯ ಬಳಿಕ ಅಭಿಯೋಜನೆಯು ಆರೋಪಿಯ ವಿರುದ್ಧ ಮಾಡಲಾದ ಆರೋಪವನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿದೆ ಎಂಬ ಕಾರಣ ನೀಡಿ ಆರೋಪಿಯನ್ನು ದೋಷಮುಕ್ತ ಗೊಳಿಸಿ ಮಾನ್ಯ ಸುಳ್ಯ ಹಿರಿಯ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ್ ಬಾಬು ತೀರ್ಪಿತ್ತಿದ್ದಾರೆ . ಆರೋಪಿಯ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ,ರಾಜೇಶ್ ಬಿ. ಜಿ ಹಾಗೂ ಶ್ಯಾಮ್ ಪ್ರಸಾದ್ ರವರು ವಾದಿಸಿದ್ದರು .
- Thursday
- November 21st, 2024