ಜು.6 ರಂದು ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ನಾರಾಯಣನ್ ಎಂಬ ವ್ಯಕ್ತಿ ಪಾಲದಿಂದ ಬಿದ್ದು ನಾಪತ್ತೆಯಾದ ಪ್ರಕರಣದಲ್ಲಿ ಸುಳ್ಯ ಪ್ರಕೃತಿ ವಿಕೋಪ ತಂಡದಿಂದ ನಿರಂತರ 43 ಗಂಟೆಗಳ ಕಾರ್ಯಚರಣೆ ನಡೆಸುತ್ತಿದ್ದು, ಜತೆಗೆ ಕುಟುಂಬ ಸದಸ್ಯರು ಬಂದು ಹುಡುಕಿದರೂ ಪತ್ತೆಯಾಗದೇ ತಮ್ಮ ಊರಿಗೆ ಮತ್ತೆ ಮರಳಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಎಸ್ ಡಿ ಆರ್ ಫ್ , ಪೈಚಾರ್ ಮುಳುಗು ತಜ್ಞರು , ವಿಖಾಯ ತಂಡ , ಅಗ್ನಿಶಾಮಕ ದಳ , ಹಾಗೂ ಕಂದಾಯ ಇಲಾಖಾ ಅಧಿಕಾರಿಗಳು ಸ್ಥಳದಲ್ಲೆ ಬೀಡು ಬಿಟ್ಟಿದ್ದು ಪೈಚಾರ್ ಮುಳುಗು ತಜ್ಞರ ಪ್ರಕಾರ ಹೊಳೆಯ ನೀರಿನಲ್ಲಿ ಭಾರಿ ಏರಿಕೆಯಾಗಿದ್ದು, ಒಳ ಹರಿವು ಹೆಚ್ಚಳವಾಗಿದೆ ಮತ್ತು ಒಳಹರಿವು ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ನಾಪತ್ತೆಯಾದ ವ್ಯಕ್ತಿ ದೂರದ ವರೆಗೆ ಕೊಚ್ಚಿ ಹೋಗಿರುವ ಸಾಧ್ಯತೆಗಳಿವೆ ಎಂದಿದ್ದಾರೆ. ನಿರಂತರವಾಗಿ 43 ಗಂಟೆಗಳ ಹುಡುಕಾಟ ಫಲಪ್ರದವಾಗದೇ ಇದ್ದು ಇದೀಗ ಪೈಚಾರ ಮುಳುಗು ತಜ್ಞರ ಮಾಹಿತಿ ಆಧರಿಸಿ, ಈ ಹೊಳೆ ಅರಂತೋಡು ಬಳಿ ಪಯಸ್ವಿನಿ ನದಿಯನ್ನು ಸಂಪರ್ಕಿಸುತ್ತಿದ್ದು ಇದೀಗ ಅರಂತೋಡಿನಿಂದ ಹುಡುಕಾಟ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ. ಪೈಚಾರ್ ಮುಳುಗು ತಜ್ಞರ ತಂಡದಲ್ಲಿ ಶರೀಫ್ , ಅಬ್ಬಾಸ್ ಹಾಗೂ ಶಿಯಾಬ್ ಇದ್ದರೆ ವಿಖಾಯ ತಂಡದಲ್ಲಿ ತಾಜುದ್ದೀನ್ ಟರ್ಲಿ , ಅಬ್ದುಲ್ ಖಾದರ್ , ತಾಜುದ್ದಿನ್ ಅರಂತೋಡು , ಮುನೀರ್ ಅರಂತೋಡು ಹಾಗೂ ಎಸ್ ಡಿ ಆರ್ ಫ್ ಶೀನ ನಾಯ್ಕ್ , ಕಮಾಡೆಂಟ್ ಶರತ್ ಕುಮಾರ್ ನೇತೃತ್ವದಲ್ಲಿ ನಿರಂತರವಾಗಿ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದು ಸುಮಾರು ಹನ್ನೊಂದು ಜನರ ತಂಡವನ್ನು ಒಳಗೊಂಡಿದೆ. ಅದೇ ರೀತಿಯಲ್ಲಿ ಅಗ್ನಿಶಾಮಕ ದಳವು ಸುಮಾರು ಎಂಟು ಜನರ ತಂಡ ಹಾಗೂ ಹೋಂ ಗಾರ್ಡ್ ಪ್ರಭಾಕರ ಪೈ ಯವರು ಸತತವಾಗಿ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದಾರೆ. ಇಂದು ಸಂಜೆಯ ಒಳಗಾಗಿ ಪತ್ತೆಯಾಗಬಹುದು ಎಂದು ಅಂದಾಜಿಸಲಾಗಿದ್ದು, ನಾಲ್ಕು ತಂಡಗಳಾಗಿ ಹುಡುಕಾಟ ನಡೆಸುತ್ತಿದ್ದಾರೆ.ಕಂದಾಯ ಅಧಿಕಾರಿಗಳಾದ ತಹಶೀಲ್ದಾರ್ ಮಂಜುನಾಥ್ , ಕಂದಾಯ ನಿರೀಕ್ಷಕರಾದ ಕೊರಗಪ್ಪ ಹೆಗ್ಡೆ , ಗ್ರಾಮ ಆಡಳಿತಾಧಿಕಾರಿ ಶರತ್ , ಗ್ರಾಮ ಸಹಾಯಕರಾದ ನಾರಾಯಣ , ಆಲೆಟ್ಟಿ ಗ್ರಾಮ ನೋಡೆಲ್ ಅಧಿಕಾರಿಗಳಾದ ಪಿ ಡಬ್ಲ್ಯೂಡಿ ಇಂಜಿನಿಯರ್ ಎ ಪಿ ಲೋಕೇಶ್ , ಹಾಗೂ ಪೋಲೀಸ್ ಠಾಣಾಧಿಕಾರಿ ಈರಯ್ಯ ಸಿಬ್ಬಂದಿಗಳಾದ ಪ್ರಕಾಶ್ ,ಸೇರಿದಂತೆ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.ನಾಪತ್ತೆಯಾದ ವ್ಯಕ್ತಿಯು ಸ್ಥಳೀಯ ವ್ಯಕ್ತಿಗಳ ಮಾಹಿತಿ ಪ್ರಕಾರ ಇಲ್ಲಿನ ಕೆಲಸವನ್ನು ಬಿಟ್ಟು ತಮ್ಮ ಊರಾದ ಚಿತ್ತಾರಿಕಲ್ ಕಡುಮನೆ ಹೊಸದುರ್ಗಕ್ಕೆ ತೆರಳಲು ತಮ್ಮ ಬ್ಯಾಗ್ ಸಮೇತರಾಗಿ ಹೊರಟು ಬಂದಿದ್ದರು ಎಂದು ಹೇಳಲಾಗುತ್ತಿದ್ದು ಬೀಳುವ ಸಂದರ್ಭದಲ್ಲಿ ಮೂವರು ಜೊತೆಗಿದ್ದರು ಎಂದು ಹೇಳಲಾಗುತ್ತಿದ್ದು ಮೂವರಲ್ಲಿ ಒಬ್ಬ ನೀರುಪಾಲಾಗುತ್ತಿದ್ದಂತೆ ತಮ್ಮ ಕೆಲಸದ ಸ್ಥಳದಲ್ಲಿದ್ದ ರೈಟರ್ ಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ರೈಟರ್ ಕೂಡ ಇಲ್ಲಿ ನಿಲ್ಲದೇ ಊರಿಗೆ ತೆರಳಿದ್ದು ಅಧಿಕಾರಿಗಳಿಗೆ ಹುಡುಕಾಟಕ್ಕೆ ಅಡಚಣೆಯಾಗುತ್ತಿದೆ. ನಾಪತ್ತೆಯಾದ ವ್ಯಕ್ತಿಯ ಆಧಾರ್ ಕಾರ್ಡ್ ನಲ್ಲಿರುವ ದೂರವಾಣಿ ಸಂಖ್ಯೆ ಇನ್ಯಾಯರೋದೋ ಬಳಿಯಲ್ಲಿದ್ದು ಹುಡುಕಾಟಕ್ಕೆ ಇದು ಕೂಡ ಒಂದು ಅಡಚಣೆಯಾಗಿದೆ ಎಂದು ತಿಳಿದು ಬಂದಿದೆ. ಹುಡುಕಾಟ ಅರಂತೋಡಿಗೆ ಶಿಫ್ಟ್ ! ಇತ್ತ ನೀರಿನ ಹರಿವು ಹೆಚ್ಚಳವಾಗಿದ್ದು ಸುಮಾರು 3 ಕಿಲೋ ಮೀಟರ್ ದೂರದ ವರೆಗೆ ಹುಡುಕಾಟ ನಡೆಸಿದ್ದು ಅಲ್ಲಿ ಎಲ್ಲಿಯು ಪತ್ತೆಯಾಗದ ಹಿನ್ನಲೆಯಲ್ಲಿ ಇನ್ನು ಪಯಸ್ವಿನಿ ನದಿಯು ಅರಂತೋಡಿನಲ್ಲಿ ಸಂಪರ್ಕಿಸುತ್ತಿದ್ದು ಅಲ್ಲಿಂದ ಭೋಜನದ ಬಳಿಕ ಅಲ್ಲಿಂದ ಹುಡುಕಾಟ ನಡೆಸಲಾಗುವುದು ಎಂದು ತಿಳಿದುಬಂದಿದೆ.
- Saturday
- November 23rd, 2024