
ಸುಳ್ಯ:ಕಳೆದೆರಡು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.ಭಾರೀ ಮಳೆಯ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ಎರಡನೇ ದಿನವೂ ರಜೆ ಘೋಷಣೆ ಮಾಡಲಾಗಿದ್ದು ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡ ಪಯಸ್ವಿನಿ ನದಿಯ ಹರಿವು ಹೆಚ್ಚಳವಾಗಿದ್ದು ಕಳೆದ ಕೆಲವು ವರ್ಷಗಳಿಂದ ಪ್ರಕೃತಿ ದುರಂತ ಸಂಭವಿಸುತ್ತಿರುವ ಸ್ಥಳಗಳಲ್ಲಿನ ಜನ ಆತಂಕಿತಕ್ಕಿಡಾಗಿದ್ದು, ಇತ್ತ ಭಾರಿ ಮಳೆಯ ಪರಿಣಾಮತೊಡಿಕಾನ ಗ್ರಾಮದ ಕುಂಟುಕಾಡು – ಮಾವಿನಕಟ್ಟೆ – ಮುತ್ತುಕೋಡಿ ರಸ್ತೆಯ ಮಾವಿನಕಟ್ಟೆ ಎಂಬಲ್ಲಿ ಬರೆ ಜರಿದು ರಸ್ತೆ ಬಂದ್ ಆಗಿದೆ.ಅಲ್ಲದೇ ದೊಡ್ಡ ತೋಟ ಮರ್ಕಂಜ ರಸ್ತೆಯ ದೊಡ್ಡತೋಟದಿಂದ ಸ್ವಲ್ಪ ಮುಂದೆ ಮರವೊಂದು ರಸ್ತೆಯ ಮೇಲೆ ಬಿದ್ದು ವಿದ್ಯುತ್ ತಂತಿಯಲ್ಲಿ ಸಿಲುಕಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಇತ್ತ ಅಜ್ಜಾವರ ಮಂಡೆಕೋಲು ಸುಳ್ಯ ನಗರ ಸೇರಿದಂತೆ ನಾನಾ ಕಡೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ , ಮಣ್ಣು ಕುಸಿತ , ಕಪೌಂಡ್ ಕುಸಿತ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಸುಳ್ಯ ತಾಲೂಕು ಆಡಳಿತ ಸರ್ವ ರೀತಿಯಲ್ಲಿ ಸನ್ನದ್ದಗಿದ್ದು ಜನತೆಯು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ . ಇತ್ತ ವಿಧ್ಯಾರ್ಥಿಗಳು ಯಾವುದೇ ಕಾರಣಕ್ಕು ಮನೆ ಬಿಟ್ಟು ಹಳ್ಳ ಕೊಳ್ಳಗಳ ಬಳಿ ಅಥಾವಾ ನೀರು ನೋಡುವ ಸಾಹಸಕ್ಕೆ ಕೈ ಹಾಕಬಾರದೆಂದು ಈ ಮೂಲಕ ತಾಲೂಕು ಆಡಳಿತ ಸೂಚನೆಯನ್ನು ನೀಡಿದೆ.