
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕ ಎಂಬಲ್ಲಿ ಇಂದು ತಮ್ಮ ಕೆಲಸವನ್ನು ಮುಗಿಸಿ ಹಿಂದುರುಗುತ್ತಿದ್ದ ನಾಲ್ವರ ಪೈಕಿ ಓರ್ವ ಅಡಿಕೆ ಪಾಲದಿಂದ ಆಯತಪ್ಪಿ ಬಿದ್ದ ಪ್ರಕರಣದಲ್ಲಿ ಪ್ರಾಥಮಿಕ ಮಾಹಿತಿಯಂತೆ ಆಯತಪ್ಪಿ ಬಿದ್ದ ವ್ಯಕ್ತಿಯನ್ನು ನಾರಾಯಣ ಅಂದಾಜು 45 ವರ್ಷ ಎಂದು ಹೇಳಲಾಗಿದ್ದು ಇದೀಗ ರಾತ್ರಿಯಾದ ಹಿನ್ನಲೆಯಲ್ಲಿ ಹುಡುಕಾಟ ಕಷ್ಟ ಸಾಧ್ಯವಾಗಿದ್ದು ನಾಳೆ ಮುಂಜಾನೆ ಎಸ್ ಡಿ ಆರ್ ಫ್ ಶೋಧಕಾರ್ಯಕ್ಕೆ ಬರಲಿದೆ ಎಂದು ತಿಳಿದು ಬಂದಿದ್ದು ಸ್ಥಳದಲ್ಲಿ ಕಂದಾಯ ಇಲಾಖ ಅಧಿಕಾರಿಗಳು ಮೊಕ್ಕಂ ಹೂಡಿದ್ದು ಎಲ್ಲಾ ರೀತಿಯ ಆಯಾಮಗಳಲ್ಲಿ ಜೊತೆಗಾರರಲ್ಲಿ ಮಾಹಿತಿ ಕ್ರೂಢಿಕರಣ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.