ಮಹಿಳೆಯರು ತಾವು ಯಾರಿಗೂ ಕಡಿಮೆಯಿಲ್ಲ ಎಂಬಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು, ಸಮಾಜದ ಹಲವು ಜವಾಬ್ದಾರಿಯುತ ಸ್ಥಾನಗಳಲ್ಲಿ ಮಹಿಳೆಯರು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ವ-ಉದ್ಯಮದಲ್ಲೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ತೋರುತ್ತಿದ್ದು, ಅದೇ ರೀತಿ ಇದೀಗ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ದೀಪ ಸಂಜೀವಿನಿ ಸ್ವ-ಸಹಾಯ ಸಂಘದ ನೇತೃತ್ವದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಮಟ್ಟದ ಇತರ ಸಂಜೀವಿನಿ ಸ್ವ-ಸಹಾಯ ಸಂಘಗಳ ಸಹಕಾರದೊಂದಿಗೆ ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ಸದುದ್ದೇಶದಿಂದ ಸ್ತ್ರೀ ಸಾಮರ್ಥ್ಯ ಯೋಜನೆಯ ಅಡಿಯಲ್ಲಿ ಬಟ್ಟೆ ಚೀಲ ತಯಾರಿಕಾ ಘಟಕವನ್ನು ಪ್ರಾರಂಭಿಸಿದ್ದು, ಬಟ್ಟೆ ಚೀಲ ತಯಾರಿಕೆಯ ತರಬೇತಿಯನ್ನು ಪಡೆದು ನಡುಗಲ್ಲಿನಲ್ಲಿ ಬಟ್ಟೆ ಚೀಲ ತಯಾರಿಕಾ ಘಟಕವನ್ನು ತೆರೆದು 30 ಆಸಕ್ತ ಮಹಿಳೆಯರು ಬಟ್ಟೆ ಚೀಲಗಳನ್ನು ತಯಾರಿಸಲು ಮುಂದೆ ಬಂದಿದ್ದಾರೆ. ಇವರು ಬಟ್ಟೆ ಚೀಲಗಳನ್ನು ತಯಾರಿಸಿ ತಮ್ಮೂರಿನ ಅಂಗಡಿಗಳಿಗೆ ನೀಡಲು ತೀರ್ಮಾನಿಸಿದ್ದು, ಈಗಾಗಲೇ ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಬಟ್ಟೆ ಚೀಲಗಳಿಗೆ ಬೇಡಿಕೆಗಳು ಬಂದಿದ್ದು, ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ಇವರ ಸದುದ್ದೇಶಕ್ಕೆ ಒಂದೊಳ್ಳೆಯ ರೀತಿಯಲ್ಲಿ ಚಾಲನೆ ದೊರೆತಂತಾಗಿದೆ.ಒಟ್ಟಿನಲ್ಲಿ ಮಹಿಳೆಯರು ತಾವು ಯಾರಿಗೂ ಕಡಿಮೆಯಿಲ್ಲ ಎಂಬಂತೆ ತಮ್ಮ ಊರಿನಲ್ಲಿಯೇ ಪರಿಸರಸ್ನೇಹಿ ಬಟ್ಟೆ ಚೀಲ ತಯಾರಿಸುವ ಸ್ವ-ಉದ್ಯಮವನ್ನು ಪ್ರಾರಂಭಿಸಿ ತಮ್ಮ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿಸುವ ಇವರ ಸಂಕಲ್ಪಕ್ಕೆ ಮೆಚ್ಚುಗೆ ಸೂಚಿಸಲೇಬೇಕು.
✍️ಉಲ್ಲಾಸ್ ಕಜ್ಜೋಡಿ