ಕರಾವಳಿ ಜಿಲ್ಲೆಯಾಧ್ಯಂತ ಭಾರಿ ಮಳೆಯಾಗುತ್ತಿದ್ದುಭಾರೀ ಮಳೆಗೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಬೊಳುಗಲ್ಲು ಎಂಬಲ್ಲಿ ಸರಕಾರದ ಸಹಾಯಧನದಲ್ಲಿ ನಿರ್ಮಿಸಿದ ಹೊಸ ಮನೆ ಮೇಲೆ ಮರವೊಂದು ಉರುಳಿಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಬೊಳುಗಲ್ಲು ಬಾಲಚಂದ್ರ ಎಂಬವರ ಮನೆ ಮೇಲೆ ಮರ ಬಿದ್ದು ಈ ಅವಘಡ ಸಂಭವಿಸಿದೆ. ಕಳೆದೆರಡು ದಿನದಿಂದ ಮಂಡೆಕೋಲು ಭಾಗದಲ್ಲಿ ಎಡೆ ಬಿಡದೆ ಮಳೆ ಸುರಿಯುತ್ತಿದ್ದು ಇಂದು ಬೆಳಗ್ಗೆ ಸುಮಾರು10.30 ರ ವೇಳೆಗೆ ಮಳೆಯೊಂದಿಗೆ ಗಾಳಿಯು ಬೀಸಿತ್ತು ಪರಿಣಾಮ ಬಾಲಚಂದ್ರರ ಮನೆಯ ಪಕ್ಕದಲ್ಲಿ ಇದ್ದು ಬೃಹತ್ ಗಾತ್ರದ ಬೀಟೆ ಮರ ಬುಡ ಸಮೇತ ಮಗುಚಿ ಮನೆ ಮೇಲೆ ಬಿದ್ದಿದೆ. ಈ ವೇಳೆ ಬಾಲಚಂದ್ರರು ಮನೆಯೊಳಗಿದ್ದು ಶಬ್ದ ಕೇಳಿ ಹಿಂಬದಿಯಿಂದಾಗಿ ಹೊರಗೆ ಬಂದಿದ್ದಾರೆ. ಮನೆಯಿಂದ ಹೊರ ಓಡುವ ವೇಳೆ ಅವರ ಮೇಲೆ ಹಂಚು ಹುಡಿಯಾಗಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಬಾಲಚಂದ್ರರರವರು ಎರಡು ವರ್ಷದ ಹಿಂದೆ ಸರಕಾರದ ಸಹಾಯಧನ ಪಡೆದು ಹೊಸ ಮನೆ ಕಟ್ಟಲು ಆರಂಭಿಸಿ ಅದು ಇತ್ತೀಚೆಗೆ ಕೆಲಸವು ಪೂರ್ಣಗೊಂಡಿದ್ದು ಅದೇ ಮನೆಯಲ್ಲಿ ಅವರು ಮಲಗುತ್ತಿದ್ದರು. ಪಕ್ಕದ ಕೊಟ್ಟಗೆಯಲ್ಲಿ ಅಡುಗೆ ಮಾಡುತ್ತಿದ್ದರು. ದೊಡ್ಡ ಗಾತ್ರದ ಮರ ಬಿದ್ದುದರಿಂದ ಮನೆಯ ಜತೆಗೂ ಕೊಟ್ಟಿಗೆಯೂ ಸಂಪೂರ್ಣ ಜಖಂಗೊಂಡಿದೆ. ಮರ ಪೂರ್ತಿಯಾಗಿ ಮನೆಯನ್ನು ಆವರಿಸಿಕೊಂಡಿದ್ದು ಸ್ಥಳಕ್ಕೆ ಕಂದಾಯ ಇಲಾಖೆಯವರು, ಸ್ಥಳೀಯ ಪಂಚಾಯತ್ ಜನಪ್ರತಿನಿಧಿಗಳು ಭೇಟಿ ನೀಡಿದ್ದು ಘಟನೆಯ ವಿಚಾರ ತಿಳಿದು ಜನರು ಸ್ಥಳಕ್ಕೆ ಜಮಾಯಿಸಿದರು . ಗ್ರಾಮ ಪಂಚಾಯತ್ ವತಿಯಿಂದ ಈಗಾಗಲೇ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳಿಗೆ ವಿಷಯ ತಲುಪಿಸಿದ್ದು ಬಾಲಚಂದ್ರರವರ ಮನೆಯವರಿಗೆ ಉಳಿದುಕೊಳ್ಳಲು ತಾತ್ಕಾಲಿಕವಾಗಿ ಅವರ ಸಹೋದರಿ ಮನೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಸರಕಾರಕ್ಕೆ ಪಕೃತಿ ವಿಕೋಪದಡಿ ಐದು ಲಕ್ಷ ಪರಿಹಾರಕ್ಕು ಮನವಿ ಮಾಡಿಕೊಳ್ಳಲಾಗುವುದು . ಬಿದ್ದಿರುವ ಮರ ಬೀಟೆ ಹಾಗೂ ಬೃಹದಾಕಾರದಲ್ಲಿ ಇರುವ ಕಾರಣ ಕ್ರೇನ್ ಮೂಲಕ ತೆರವುಗೊಳಿಸಬೇಕಾದ ಅನಿವಾರ್ಯತೆ ಇದೆ ಹಾಗಾಗಿ ಕ್ರೇನ್ ಮೂಲಕ ತೆರವು ಗೊಳಿಸುವ ವ್ಯವಸ್ಥೆಯ ಬಗ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನುತಾ ಪಾತಿಕಲ್ಲು ತಿಳಿಸಿದ್ದಾರೆ.ಅರಣ್ಯ ಇಲಾಖೆಗೆ ಈ ಕುರಿತಂತೆ ವಿಚಾರಿಸಿದಾಗ ನಮ್ಮ ಗಮನಕ್ಕೆ ಬಂದಿಲ್ಲಾ ಸ್ಥಳೀಯ ಅಧಿಕಾರಿಗಳ ಜೊತೆ ಮಾತನಾಡಿ ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡುವುದಾಗಿ ಫಾರೆಸ್ಟರ್ ಯಶೋಧರ ತಿಳಿಸಿದರು.
- Friday
- November 1st, 2024