ಪೆರುವಾಜೆಯ ಡಾ. ಕೆ. ಶಿವರಾಮ ಕಾರಂತ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಉಪನ್ಯಾಸಕಿಯೋರ್ವರು ಕಾಲೇಜು ವಿದ್ಯಾರ್ಥಿ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಹಾಗೂ ಜಂಟಿ ನಿರ್ದೇಶಕರು ಆಗಮಿಸಿ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಕೈಬಿಟ್ಟ ಘಟನೆ ಜೂ.03 ರಂದು ನಡೆದಿದೆ.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುನಿತಾ ರವರು ಎಂ.ಕಾಂ. ವಿದ್ಯಾರ್ಥಿ ದೀಕ್ಷಿತ್ ವಿರುದ್ಧ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜು ಪ್ರವೇಶ ದ್ವಾರದ ಬಳಿ ಧರಣಿ ನಡೆಸಿ ಉಪನ್ಯಾಸಕಿ ವಿರುದ್ಧ ಘೋಷಣೆ ಕೂಗಿ ಪ್ರತಭಟಿಸಿದ್ದರು. ಮೇಲಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದು ಧರಣಿ ಕುಳಿತ ವಿಚಾರ ತಿಳಿದು ಮೇಲಧಿಕಾರಿಗಳು ಬಂದು ಕ್ರಮ ಕೈಗೊಳ್ಳುವ ವರೆಗೆ ಅನಿರ್ದಿಷ್ಟಾವಧಿ ಧರಣಿ, ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.
ಜು. 3 ರಂದು ಸಂಜೆ ಕಾಲೇಜು ವಿಭಾಗದ ಜಿಲ್ಲಾ ಜಂಟಿ ನಿರ್ದೇಶಕರಾದ ರಾಮೇ ಗೌಡರವರು ಕಾಲೇಜಿಗೆ ಬಂದು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿ, ಬಳಿಕ ಪ್ರಾಂಶುಪಾಲರು ಹಾಗೂ ಉಪನ್ಯಾಸಕಿಯ ಜೊತೆ ಮಾತುಕತೆ ನಡೆಸಿದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ಒಂದು ವಾರದೊಳಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.
ಘಟನೆಯ ಹಿನ್ನೆಲೆ.
ಕೆಲ ತಿಂಗಳುಗಳ ಹಿಂದಿನಿಂದಲೇ ಪೆರುವಾಜೆ ಕಾಲೇಜಿನಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ತಲೆದೋರುತ್ತಿದ್ದು ಬಿಕಾಂ ವಿಭಾಗದ ಸುನಿತಾ ಎಂಬ ಉಪನ್ಯಾಸಕಿಯ ಪಠ್ಯವು ವಿದ್ಯಾರ್ಥಿಗಳಿಗೆ ಅರ್ಥವಾಗದೇ ಇದ್ದು ಈ ಕುರಿತಾಗಿ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ಹಾಗೂ ಕಾಲೇಜು ಜಂಟಿ ನಿರ್ದೇಶಕರಿಗೆ ದೂರು ನೀಡಿದ್ದರು. ಕಾಮರ್ಸ್ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಹೆಸರಿನಲ್ಲಿ ಪ್ರಾಂಶುಪಾಲರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಅತಿಥಿ ಉಪನ್ಯಾಸಕರಿಂದ ಪಠ್ಯ ಭೋದನೆ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಇನ್ನು ಕೆಲ ದಿನಗಳಲ್ಲೆ ವಿವಿ ಮಟ್ಟದ ಸೆಮಿಸ್ಟರ್ ಪರೀಕ್ಷೆ ಬರಲಿದ್ದು ಈಗಾಗಲೇ ಪಠ್ಯವನ್ನು ಮುಗಿಸಬೇಕಿತ್ತು ಆದರೆ ಪಠ್ಯ ಮುಗಿಸದೇ ಅವರು ಕಾಲೇಜಿನಲ್ಲಿ ಇರುವುದಕ್ಕಿಂತ ಹೆಚ್ಚು ರಜೆಯಲ್ಲೆ ಇರುತ್ತಾರೆ ಮತ್ತೆ ಹೇಗೆ ಪಠ್ಯ ಪೂರ್ಣ ಗೊಳಿಸುವುದು, ಪಠ್ಯಗಳು ಬಾಕಿ ಇರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕಿಯ ವಿರುದ್ದ ತಿರುಗಿ ಬಿದ್ದಿದ್ದರು. ಇದರಿಂದಾಗಿ ದೀಕ್ಷೀತ್ ಆಚಾರ್ ಎಂಬ ಪಿಜಿ ವಿದ್ಯಾರ್ಥಿ ಇದೆಲ್ಲದಕ್ಕೂ ಕಾರಣ ಎಂದು ಆರೋಪಿಸಿ ಪಿಜಿ ವಿದ್ಯಾರ್ಥಿಯ ಮೇಲೆ DYSP ಗೆ ಉಪನ್ಯಾಸಕಿ ದೂರು ನೀಡಿದ್ಸಾರೆ. ನನ್ನನ್ನು ಹಿಂಬಾಲಿಸುತ್ತಾನೆ, ಗುರಾಯಿಸಿ ನೋಡುತ್ತಾನೆ ಎಂಬೆಲ್ಲ ಆರೋಪಗಳನ್ನು ಹೊರಿಸಿ ದೂರು ನೀಡಿದ್ದರು. ಈ ಬಗ್ಗೆ ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ ಯವರಿಗೆ ನೇರವಾಗಿ ದೂರು ಬಂದ ಹಿನ್ನೆಲೆಯಲ್ಲಿ ಭಾನುವಾರ ವಿದ್ಯಾರ್ಥಿ ಮತ್ತು ಉಪನ್ಯಾಸಕಿ ಇಬ್ಬರನ್ನು ಬೆಳ್ಳಾರೆ ಠಾಣೆಗೆ ಕರೆಸಿ ರಾಜಿ ಪಂಚಾತಿಗೆ ಮಾಡಿದ್ದರು ಎಂದು ತಿಳಿದುಬಂದಿದೆ. ಮರುದಿನ ಮುಂಜಾನೆ ದೀಕ್ಷೀತ್ ಆಚಾರ್ ವಿರುದ್ದ ದೂರು ನೀಡಿದ ಮಾಹಿತಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ಕೆರಳಿದ್ದು ಗೊ ಬ್ಯಾಕ್, ವೀ ವಾಂಟ್ ಜಸ್ಟಿಸ್ ಎಂಬ ಘೋಷಣೆಗಳನ್ನು ಕೂಗ ತೊಡಗಿ ಧೀಡೀರ್ ಪ್ರತಿಭಟನೆಗೆ ಮುಂದಾಗಿದ್ದರು. ಎಲ್ಲಾ ವಿದ್ಯಾರ್ಥಿಗಳು ತರಗತಿಗೆ ಗೈರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಈ ಭಾರಿ ಅಡ್ಮೀಶನ್ ಪಡೆದುಕೊಳ್ಳಲು ವಿದ್ಯಾರ್ಥಿಗಳ ಕೊರತೆಯಾಗಿದ್ದು ಇದೆಲ್ಲದಕ್ಕೂ ಈ ಉಪನ್ಯಾಸಕರೇ ನೇರ ಕಾರಣ ನಾವು ಹೇಗೆ ಇಲ್ಲಿ ಅಭ್ಯರ್ಥಿಗಳನ್ನು ಕರೆ ತರುವುದು ಎಂದು ಉಪನ್ಯಾಸಕರಲ್ಲಿ ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದರು.
ನಮ್ಮ ಕಾಲೇಜಿನ ಕಾಮರ್ಸ್ ವೀಭಾಗದ ವಿದ್ಯಾರ್ಥಿಗಳು ಈ ಹಿಂದೆಯೇ ಕಾಮರ್ಸ್ ಉಪನ್ಯಾಸಕಿಯ ಬಗ್ಗೆ ವೈಯಕ್ತಿಕವಾಗಿ ನನಗೆ ದೂರು ಕೊಟ್ಟಿದ್ದು ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅತಿಥಿ ಉಪನ್ಯಾಸಕರಿಂದ ಬೋಧನೆ ಕಾರ್ಯ ನಡೆಸಿದ್ದೆವು ಮತ್ತು ಈ ಪ್ರಕರಣ ಪೋಲೀಸ್ ಠಾಣೆ ಮೆಟ್ಟಿಲು ಹತ್ತಲು ಏನು ಕಾರಣ ಎಂದು ಗೊತ್ತಿಲ್ಲಾ ಮತ್ತು ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಹಿತ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ ಆದಷ್ಟು ಬೇಗ ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳು ಮುಗಿಸುತ್ತಾರೆ ಎಂದು ಪ್ರಾಂಶುಪಾಲರು ತಿಳಿಸಿದರು .
ಈ ಎಲ್ಲಾ ವಿಧ್ಯಮಾನಗಳಿಗೆ ದೀಕ್ಷೀತ್ ಆಚಾರ್ ಎಂಬ ವಿದ್ಯಾರ್ಥಿಯೇ ಕಾರಣ ನಾನು ನೀಡಿರುವ ದೂರಿನ ವಿಚಾರವಾಗಿ ವಿದ್ಯಾರ್ಥಿಯ ಮುಂದಿನ ಭವಿಷ್ಯದ ದೃಷ್ಟಿಯಲ್ಲಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದು ಸೋಮವಾರ ಧೀಢೀರ್ ಆಗಿ ಪ್ರತಿಭಟನೆಗೆ ಕಾರಣ ಏನು ಎಂಬುವುದು ಗೊತ್ತಿಲ್ಲಾ ಹಾಗೂ ಉಪನ್ಯಾಸಕರ ವಿರುದ್ದ ಈ ರೀತಿ ಆರೋಪ ಹೊರಿಸಿ ಈ ರೀತಿಯಲ್ಲಿ ಮಾಡುವುದು ಸರಿಯಲ್ಲ ಈ ಎಲ್ಲಾ ಘಟನೆಗಳಿಗೆ ಮತ್ತು ಜೆಡಿಯವರಿಗೆ ದೂರು ನೀಡಲು ಕೂಡ ಈ ವಿದ್ಯಾರ್ಥಿಯೇ ಕಾರಣ ಎಂದು ಹೇಳಿದರು.
ಕಾಲೇಜಿನಲ್ಲಿ ವರ್ಗಾವಣೆಗೊಂಡ ಓರ್ವ ಉಪನ್ಯಾಸಕ ವಿದ್ಯಾರ್ಥಿಗಳಿಂದ ಕಾರ್ಯಕ್ರಮದ ಕಾರಣ ನೀಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಂಗ್ರಹಿಸಿ ಅವರು ತೆರಳಿದ್ದಾರೆ. ಈ ಕುರಿತಾಗಿಯು ನಾವು ದೂರು ನೀಡಿದ್ದರೂ ಇಲ್ಲಿಯ ತನಕ ಕ್ರಮ ಜರುಗಿಸಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿಕೊಳ್ಳುತ್ತಿದ್ದರು ಇದೇ ವಿಚಾರವನ್ನು ಕೂಡ ಜಂಟಿ ನಿರ್ದೇಶಕ ಗಮನಕ್ಕೆ ಮತ್ತೊಮ್ಮೆ ತರಲಾಗಿದ್ದು ಮುಂದೆ ಪೆರುವಾಜೆ ಕಾಲೇಜಿನ ವಿಚಾರ ಯಾವ ಹಂತಕ್ಕೆ ತಲುಪುವುದು ಶಿಕ್ಷಣ ಇಲಾಖೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡ ಬೇಕಿದೆ.