
ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರ ಕಡೂರು ಇವರು ನಡೆಸಿದ ಮುಕ್ತ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗಪಟುಗಳಿಗೆ ಹಲವು ಪ್ರಶಸ್ತಿ ಲಭಿಸಿದೆ. 8 ರಿಂದ 12ನೇ ವಯೋಮಾನದ ಬಾಲಕರ ವಿಭಾಗದಲ್ಲಿ ತನುಷ್ ಕೆ ಆರ್ ದ್ವಿತೀಯ ಸ್ಥಾನ, ತನುಷ್ ಮೋಂಟಡ್ಕ ತೃತೀಯ ಸ್ಥಾನ, 5 ರಿಂದ 7ನೇ ವಯೋಮಾನದ ಬಾಲಕರ ವಿಭಾಗದಲ್ಲಿ ಆಶ್ರಿತ್ ಎ.ಸಿ ಚತುರ್ಥ ಸ್ಥಾನ,8 ರಿಂದ 12ನೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸೋನಾ ಅಡ್ಕಾರ್ ತೃತೀಯ ಸ್ಥಾನ, ತನ್ವಿ ಪಿ ರೈ ಚತುರ್ಥ ಸ್ಥಾನ ಹಾಗೂ ಎರಡು ಸುತ್ತಿನಲ್ಲಿ ನಡೆದ ವೈಯಕ್ತಿಕ ಚಾಂಪಿಯನ್ ಆಫ್ ಚಾಂಪಿಯನ್ ಶಿಪ್ ವಿಭಾಗದಲ್ಲಿ ಸೋನಾ ಅಡ್ಕಾರ್ ಚತುರ್ಥ ಸ್ಥಾನ ಗಳಿಸಿರುತ್ತಾರೆ ಹಾಗೂ ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಗುರುಗಳಾದ ಸಂತೋಷ್ ಮುಂಡಕಜೆ ಅವರಿಗೆ 2023ರ ಸ್ನೇಹಮಯಿ ಯೋಗ ಆಚಾರ್ಯ ಅವಾರ್ಡ್ ನೀಡಿ ಗೌರವಿಸಿದೆ.






