Ad Widget

ಪೆರಾಜೆ ಸೊಸೈಟಿ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ ಪುನರಾಯ್ಕೆ, ಉಪಾಧ್ಯಕ್ಷರಾಗಿ ಅಶೋಕ್ ಪೆರುಮುಂಡ

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ಉಪಾಧ್ಯಕ್ಷರಾಗಿ ಅಶೋಕ್ ಪೆರುಮುಂಡ ಆಯ್ಕೆಯಾಗಿದ್ದಾರೆ.ನಾಗೇಶ್ ಕುಂದಲ್ಪಾಡಿ ಹೆಸರನ್ನು ಕಿರಣ್ ಬಂಗಾರಕೋಡಿ ಸೂಚಿಸಿ, ಜಯರಾಮ ನಿಡ್ಯಮಲೆ ಅನುಮೋದಿಸಿದರು.ಅಶೋಕ ಪೆರುಮುಂಡರವರ ಹೆಸರನ್ನು ಶೇಷಪ್ಪ ಎನ್.ವಿ. ಸೂಚಿಸಿ, ಹೊನ್ನಪ್ಪ ಅಮೆಚೂರು ಅನುಮೋದಿಸಿದರು.ಜೂ.25 ರಂದು ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ 13 ಸ್ಥಾನಗಳನ್ನು ಗೆದ್ದುಕೊಂಡಿದ್ದರು.

ಅಜ್ಜಾವರ : ಮನೆ ಮೇಲೆ ಬಿದ್ದ ಮರ – ಹಾನಿ

ಸುಳ್ಯ ತಾಲೂಕಿನಾದ್ಯಂತ ಇಂದು ಭಾರಿ ಮಳೆ ಸುರಿಯುತ್ತಿದ್ದು ಹಲವೆಡೆ ಹಾನಿ ಸಂಭವಿಸಿದೆ.   ಭಾರಿ ಮಳೆಗೆ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಮನೆ ಮೇಲೆ ಮರ ಉರುಳಿಬಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ. ದೊಡ್ಡೇರಿ ಬಳಿಯ ಬೂಡುಮಕ್ಕಿ ಸುಧಾಮರ ಹಳೆ ಮನೆಯಲ್ಲಿ ಅವರ ಸಹೋದರಿ ವಾಸ್ತವ್ಯವಿದ್ದು, ಮನೆಯ ಮೇಲೆ ಮರ ಬಿದ್ದು ಹಾನಿಸಂಭವಿಸಿದೆ ಎಂದು ತಿಳಿದು ಬಂದಿದೆ. ಹಾನಿಯಾದ...
Ad Widget

ಐವರ್ನಾಡು : ಪ್ರಾಕೃತಿಕ ವಿಕೋಪದ ಗ್ರಾಮ ಮಟ್ಟದ  ಮುಂಜಾಗೃತ ಸಮಿತಿ ಸಭೆ

ಐವರ್ನಾಡು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಪ್ರಾಕೃತಿಕ ವಿಕೋಪದ ಗ್ರಾಮ ಮಟ್ಟದ  ಮುಂಜಾಗೃತ ಸಮಿತಿ ಸಭೆ ಜು.3 ರಂದು  ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ  2023-24 ನೇ ಸಾಲಿನ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪದ ಗ್ರಾಮ ಮಟ್ಟದ  ಮುಂಜಾಗೃತ ಸಮಿತಿ ಸಭೆ ನಡೆಯಿತು.

ಸುಳ್ಯ ಬೆಳ್ಳಾರೆ ರಸ್ತೆಯಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ – ಕೃತಕ ನೆರೆ ಸೃಷ್ಠಿ

ಸುಳ್ಯ ಬೆಳ್ಳಾರೆ ರಸ್ತೆಯಲ್ಲಿ ಐವರ್ನಾಡು ಹಾಗೂ ದರ್ಖಾಸ್ತು ರಸ್ತೆ ಬದಿಯ ಚರಂಡಿಗಳು ಮುಚ್ಚಿ ಹೋದ ಪರಿಣಾಮವಾಗಿ ಹಲವಾರು ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಇದರಿಂದ ವಾಹನ ಸವಾರರು ಕಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಹರಿಸಿ ತಕ್ಷಣ ಸಮಸ್ಯೆ ನಿವಾರಿಸಬೇಕು ಎಂದು ನಾಗರಿಕರು ಹಾಗೂ ವಾಹವ ಸವಾರರು ಆಗ್ರಹಿಸಿದ್ದಾರೆ.

ಐವರ್ನಾಡು : ರಸ್ತೆ ಬದಿ ಕಸ ಎಸೆದವರಿಗೆ 5000 ರೂ. ದಂಡ

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ವತ್ತಡ್ಕ ಎಂಬಲ್ಲಿ  ತ್ಯಾಜ್ಯ ಎಸೆದ  ದರ್ಖಾಸ್ತು ನಿವಾಸಿ ತ್ಯಾಗರಾಜು ಎಂಬವರಿಗೆ ರೂ 5000.00 ದಂಡ ವಿಧಿಸಿದ ಘಟನೆ ಜು.3 ರಂದು ನಡೆದಿದೆ. ಜು.2ರಂದು ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ನಡೆಯುವ ಮಾಸಿಕ ಸ್ವಚ್ಚತಾ ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದ  ಗ್ರಾಮಸ್ಥರು ಮರ್ವತ್ತಡ್ಕದಲ್ಲಿ  ಎಸೆದಿದ್ದ  ತ್ಯಾಜ್ಯ ತುಂಬಿದ್ದ ಬ್ಯಾಗ್  ಪರಿಶೀಲಿಸಿ ಎಸೆದವರನ್ನು ಪತ್ತೆಹಚ್ಚಿ ಪಂಚಾಯತ್...

🧘ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಯೋಗೇನ ಚಿತ್ತಸ್ಯ ಯೋಗ ಕೇಂದ್ರಕ್ಕೆ ಪ್ರಶಸ್ತಿ🧘

ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರ ಕಡೂರು ಇವರು ನಡೆಸಿದ ಮುಕ್ತ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಯೋಗಪಟುಗಳಿಗೆ ಹಲವು ಪ್ರಶಸ್ತಿ ಲಭಿಸಿದೆ. 8 ರಿಂದ 12ನೇ ವಯೋಮಾನದ ಬಾಲಕರ ವಿಭಾಗದಲ್ಲಿ ತನುಷ್ ಕೆ ಆರ್ ದ್ವಿತೀಯ ಸ್ಥಾನ, ತನುಷ್ ಮೋಂಟಡ್ಕ ತೃತೀಯ ಸ್ಥಾನ, 5 ರಿಂದ 7ನೇ ವಯೋಮಾನದ ಬಾಲಕರ...

ಸುರಕ್ಷಾ ದಂತ ಚಿಕಿತ್ಸಾ ಲಯದ 27ನೆಯ ಸಂಸ್ಥಾಪನಾ ದಿನಾಚರಣೆ

ಸುರಕ್ಷಾ ದಂತ ಚಿಕಿತ್ಸಾ ಲಯದ 27 ನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ದಿನಾಂಕ 3 ಜುಲೈ2023 ರಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜರುಗಿತು.ಸುಮಾರು 55 ಮಂದಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ನಿವ್ರತ್ತ ಬ್ಯಾಂಕ್ ಉದ್ಯೋಗಿ ಶ್ರೀ ವಾಸುದೇವ ಹೊಳ್ಳ ಅವರಿಗೆ ಹಲಸಿನಹಣ್ಣಿನ ಗಿಡವನ್ನು ಡಾ ಮುರಲಿ ಮೋಹನ್ ಚೂಂತಾರು ಅವರು...

ಸುರಕ್ಷಾ ದಂತ ಚಿಕಿತ್ಸಾಲಯ 27 ನೇ ಪಾದಾರ್ಪಣೆ – ಹಣ್ಣಿನ ಗಿಡಗಳ ವಿತರಣೆ

ಸುರಕ್ಷಾ ದಂತ ಚಿಕಿತ್ಸಾಲಯದ 27 ನೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜು.3 ರಂದು  ಚೂಂತಾರು ಸರೋಜಿನಿ ಭಟ್ ಪ್ರತಿಷ್ಟಾನದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಜರುಗಿತು. ಸುಮಾರು 55 ಮಂದಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.  ನಿವೃತ್ತ ಬ್ಯಾಂಕ್ ಉದ್ಯೋಗಿ ವಾಸುದೇವ ಹೊಳ್ಳ ಅವರಿಗೆ ಹಲಸಿನಹಣ್ಣಿನ ಗಿಡವನ್ನು ಡಾ ಮುರಲಿ ಮೋಹನ್ ಚೂಂತಾರು ಅವರು ನೀಡುವುದರ ಮೂಲಕ ವನಮಹೋತ್ಸವ...

ಅಡ್ಕಾರು: ಸಾವಿರಾರು ರೂ. ನಗದು ಕಳ್ಳತನ _ ಪೊಲೀಸ್ ದೂರು ದಾಖಲು

ಜಾಲ್ಸೂರು ಗ್ರಾಮದ ಅಡ್ಕಾರು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಸಾವಿರಾರು ರೂ. ನಗದು ಕಳ್ಳತನ ಮಾಡಿರುವ ಘಟನೆ ಜು.1ರಂದು ನಡೆದಿದೆ. ಈ ಬಗ್ಗೆ ಮನೆ ಮಾಲಕ ಪೊಲೀಸ್ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರಿನ ಮಹಮ್ಮದ್...

ಪೆರುವಾಜೆ : ವಿದ್ಯಾರ್ಥಿಯ ಮೇಲೆ ಸುಳ್ಳು ಆರೋಪ – ವಿದ್ಯಾರ್ಥಿಗಳಿಂದ ಉಪನ್ಯಾಸಕಿಯ ವಿರುದ್ಧ ಪ್ರತಿಭಟನೆ

ವಿದ್ಯಾರ್ಥಿಯೋರ್ವನ ಮೇಲೆ ಸುಳ್ಳು ಆರೋಪ ಹೊರಿಸಿ ಪೋಲೀಸರಿಗೆ ದೂರು ನೀಡಿದ್ದಾರೆಂದು ಪೆರುವಾಜೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ  ಉಪನ್ಯಾಸಕಿಯ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ. ದೀಕ್ಷಿತ್ ಎಂಬ ವಿದ್ಯಾರ್ಥಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಕಾಮರ್ಸ್ ವಿಭಾಗದ ಉಪನ್ಯಾಸಕಿ ಸುನಿತಾ ನಾಯಕ್ ಅವರು ಪೋಲೀಸರಿಗೆ ದೂರು ನೀಡಿದ್ದು,  ಇದು ಸುಳ್ಳು...
Loading posts...

All posts loaded

No more posts

error: Content is protected !!