ಸುಳ್ಯದ 110ಕೆ ವಿ ಸಬ್ ಸ್ಟೇಷನ್ ಕಾಮಗಾರಿ ವಿಳಂಬಗೊಳ್ಳುತ್ತಿರುವ ಬಗ್ಗೆ ಸುಳ್ಯದ ಕಾಂಗ್ರೇಸ್ ಮುಖಂಡರಾದ ಎಂ ವೆಂಕಪ್ಪ ಗೌಡ, ಶಶಿಧರ್ ಎಂ ಜೆ, ಭವಾನಿ ಶಂಕರ್ ಕಲ್ಮಡ್ಕ, ಚೇತನ್ ಕಜೆಗದ್ದೆಯವರು ಜೂ.29ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಪುತ್ತೂರಿನ ಕಚೇರಿಯಲ್ಲಿ ಭೇಟಿ ನೀಡಿ ಮನವರಿಕೆ ಮಾಡಿದರು. ಈ ಬಗ್ಗೆ ಕೂಡಲೇ ಸ್ಪಂದಿಸಿದ ಶಾಸಕರು ಕೆ. ಪಿ. ಟಿ. ಸಿ ಎಲ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರು. ಸುಳ್ಯದ 110ಕೆ ವಿ ಸಬ್ ಸ್ಟೇಷನ್ ಕಾಮಗಾರಿ ವಿಳಂಬ ಕುರಿತು ಸದನದಲ್ಲಿ ವಿಚಾರ ಪ್ರಸ್ತಾಪಿಸಿ ಮುಖ್ಯಮಂತ್ರಿ ಯಾವರೊಂದಿಗೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
- Friday
- November 1st, 2024