ಸುಳ್ಯ: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳಾಗಿ ಶ್ರೀ ಮಂಜುನಾಥ್ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ನಿರಂತರವಾಗಿ ಎಂಟು ವರ್ಷಗಳ ಕಾಲ ಅಜ್ಜಾವರ ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಶರತ್ ರವರು ಕಾರ್ಯ ನಿರ್ವಹಿಸಿದ್ದು ಇದೀಗ ಹೆಚ್ಚುವರಿಯಾಗಿ ಆಲೇಟ್ಟಿ ಗ್ರಾಮದಲ್ಲಿಯು ಕರ್ತವ್ಯ ನಿರ್ವಹಿಸುತ್ತಿದ್ದರು ಇದೀಗ ತಮಗೆ ಎರಡು ದೊಡ್ಡ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಣೆ ಕಷ್ಟಾ ಹಾಗೂ ಜನತೆಗೆ ಪ್ರತಿನಿತ್ಯ ಕಛೇರಿಯಲ್ಲಿ ಸಿಗಬೇಕು ಎಂಬ ಹಿನ್ನಲೆಯಲ್ಲಿ ಅಜ್ಜಾವರ ಗ್ರಾಮದ ಗ್ರಾಮ ಆಡಳಿತಾಧಿಕಾರಿಯಾಗಿ ಶ್ರೀಮಂಜುನಾಥ್ ಆಗಮಿಸಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ವರ್ಗಾವಣೆಗೊಂಡ ಶರತ್ ರವರಿಗೆ ಕರ್ಲಪ್ಪಾಡಿ ಶ್ರೀ ಶಾಸ್ಥವೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿಯ ವತಿಯಿಂದ ಶ್ರೀ ದೇವರ ಗಂಧ ಪ್ರಸಾದವನ್ನು ನೀಡಿ ವರ್ಗಾವಣೆ ಗೊಂಡ ಸ್ಥಳದಲ್ಲಿ ಮತ್ತಷ್ಟು ಉನ್ನತಿಯನ್ನು ಹೊಂದಲಿ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮೇನಾಲ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತ್ಯವತಿ ಬಸವನಪಾದೆ , ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕ , ಸುಬೋದ್ ಶೆಟ್ಟಿ ಮೇನಾಲ , ಮಹೇಶ್ ಕುಮಾರ್ ರೈ ಮೇನಾಲ, ಅಬ್ದುಲ್ಲ ಎ , ರವಿರಾಜ್ ಕೆ , ವೆಂಕಟರಮಣ ಅತ್ಯಾಡಿ , ಸೀತರಾಮ ಕರ್ಲಪ್ಪಾಡಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.